ಗುಡ್ ಮಾರ್ನಿಂಗ್ ಕರ್ನಾಟಕ: ನೀವು ಓದಲೇಬೇಕಾದ 30 ಸುದ್ದಿಗಳು

Published : Sep 24, 2017, 07:31 AM ISTUpdated : Apr 11, 2018, 12:58 PM IST
ಗುಡ್ ಮಾರ್ನಿಂಗ್ ಕರ್ನಾಟಕ: ನೀವು ಓದಲೇಬೇಕಾದ 30 ಸುದ್ದಿಗಳು

ಸಾರಾಂಶ

ಗುಡ್ ಮಾರ್ನಿಂಗ್ ಕರ್ನಾಟಕ: ನೀವು ಓದಲೇಬೇಕಾದ 30 ಸುದ್ದಿಗಳು

1. ಇಂದು ಲಿಂಗಾಯತ ಸಮಾವೇಶ :  

ತಾರಕಕ್ಕೇರಿದೆ ಲಿಂಗಾಯತ ಸ್ವತಂತ್ರ ಧರ್ಮಯುದ್ಧ ವಿಚಾರ    - ವೀರಶೈವರ ವಿರೋಧದ ನಡುವೆಯೂ ಇಂದು ಕಲಬುರ್ಗಿಯಲ್ಲಿ ಲಿಂಗಾಯತ ಸಮಾವೇಶ -  ನಗರ ಎನ್ ವಿ ಮೈದಾನದಲ್ಲಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆ  -  5 ಲಕ್ಷ ಜನ ಸೇರುವ ಸಾಧ್ಯತೆ - ಸಚಿವ ಎಂಬಿ ಪಾಟೀಲ್, ಶರಣಪ್ರಕಾಶ್ ಪಾಟೀಲಾ ಸೇರಿದಂತೆ ಹಲವರು ಭಾಗಿ

2. ಇಂದು ಪ್ರಧಾನಿ 36ನೇ ಮನ್ ಕಿ ಬಾತ್ :   

ಇಂದು ಪ್ರಧಾನಿ ನರೇಂದ್ರ ಮೋದಿ 36ನೇ ಮನ್ ಕೀ ಬಾತ್  - ಬೆಳಗ್ಗೆ 11 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ರೆಡಿಯೋ ಭಾಷಣ - 3 ವರ್ಷದಲ್ಲಿ 36 ಆವೃತ್ತಿ​ ಪೂರ್ಣಗೊಳಿಸಿದ ಮೋದಿ ಮನ್ ಕಿ ಬಾತ್

3. ವಿಶ್ವಸಂಸ್ಥೆ ಯಲ್ಲಿ ಪಾಕಿಸ್ತಾನದ ಮಾನ ಹರಾಜು:

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಮಾನ ಹರಾಜು. ನಾವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ , ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು, ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟು ಹಾಕಿದೆ ಭಾರತ ಹೆಸರಾಂತ ವೈದ್ಯರು, ವಿಜ್ಞಾನಿಗಳನ್ನು ಹುಟ್ಟು ಹಾಕಿದೆ- ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾಷಣ

4. ಇಂದೋರ್'ನಲ್ಲಿ ಭಾರತ - ಆಸೀಸ್ ಸೆಣಸಾಟ:

ಇಂದೋರ್ ನಲ್ಲಿ ಇಂದು ಭಾರತ - ಆಸೀಸ್ ನಡುವೆ ಮೂರನೇ ಏಕದಿನ ಪಂದ್ಯ - ಗೆಲುವಿನ ನಾಗಾಲೋಟ ಮುಂದುವರೆಸಲು ಟೀಂ ಇಂಡಿಯಾ ಕಾತರ - ಸರಣಿ ಉಳಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಆಸ್ಟ್ರೇಲಿಯಾ 

5. ಕೆಪಿಎಲ್:

ಬೆಳಗಾವಿ ಪ್ಯಾಂಥರ್ಸ್  ಕೆಪಿಎಲ್ ಟಾಂಪಿಯನ್ -  ಫೈನಲ್ ನಲ್ಲಿ ವಿಜಾಪುರ ಬುಲ್ಸ್ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಬೆಳಗಾವಿ ತಂಡ -  ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಳಗಾವಿ ಪ್ಯಾಂಥರ್ಸ್

6. ಇಂದು ಕೋಟೆನಾಡಿಗೆ ಸಿಎಂ :

ಇಂದು ಚಿತ್ರದುರ್ಗಕ್ಕೆ ಸಿಎಂ ಸಿದ್ದರಾಮಯ್ಯ -  ತರಳಬಾಳು ಜಗದ್ಗುರು ಶಿವಕುಮಾರ್ ಶ್ರೀಗಳ 25ನೇ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿ - ಮಠದಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿರುವ ಸಿದ್ದರಾಮಯ್ಯ

7. ದಸರಾದಲ್ಲಿ ಸಾಲು ಸಾಲು ಸ್ಪರ್ಧೆಗಳು:

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ - ಯೋಗೋತ್ಸವ, ಹಾಫ್​ ಮ್ಯಾರಥಾನ್​ ಜೊತೆಗೆ ಜಾವಾ ಮೋಟಾರ್ ಸೈಕಲ್ ಸವಾರಿ - ರಾಜ್ಯಮಟ್ಟದ ಪುರುಷರ ಮತ್ತು ಬಾಲಕರ ಕುಸ್ತಿ ಪಂದ್ಯದ ಜೊತೆಗೆ ಯೋಗಾಸನ ಸ್ಪರ್ಧೆ, ಸಂಜೆ ಹೊತ್ತಿಗೆ ನಡೆಯಲಿದೆ ಹಾಲು ಕರೆಯುವ ಸ್ಫರ್ದೆ

8. ಇಂದಿನಿಂದ ಶ್ರೀರಂಗಪಟ್ಟಣ ದಸರಾ:

ಶ್ರೀರಂಗಪಟ್ಟಣದಲ್ಲೂ ದಸರಾ ಸಂಭ್ರಮ - ಇಂದಿನಿಂದ ಸೆಪ್ಟೆಂಬರ್​ 26ರವರೆಗೆ ನಡೆಯಲಿದೆ ಉತ್ಸವ - ಜಂಬೂ ಸವಾರಿ ಮೂಲಕ ಶ್ರೀರಂಗಪಟ್ಟಣ ದಸರೆಗೆ ಇಂದು ಮಧ್ಯಾಹ್ನ ಚಾಲನೆ - ಮೆರವಣಿಗೆಗೆ ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳ ಮೆರುಗು

9. ಈಗ ಏನೂ ಹೇಳಲ್ಲ: ಎಚ್​ಡಿಡಿ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರ  - ಸುಪ್ರೀಂಕೋರ್ಟ್ ಆದೇಶ ಪ್ರತಿ ಇನ್ನೂ ನನ್ನ ಕೈಸೇರಿಲ್ಲ - ಆದೇಶ ಪ್ರತಿ ಬಂದ ಮೇಲೆ ಪ್ರತಿಕ್ರಿಯೆ ಕೊಡ್ತೀನಿ ಅಂದ್ರು ದೇವೇಗೌಡ್ರು 

10. ರೈತರ ಮೇಲಿನ ಕೇಸ್​ ವಾಪಸ್​: ಸಿಎಂ  

ನರಗುಂದ ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ - ರೈತರ ಮೇಲೆ ಯಾವುದೇ ಕೇಸ್ ಹಾಕಿದ್ರೂ ಹಿಂಪಡೆಯಲಾಗುವುದು ಎಂದ ಸಿಎಂ - ಸಿದ್ದರಾಮಯ್ಯ ಹೇಳಿಕೆಗೆ ರೈತ ಹೋರಾಟಗಾರರು ಹರ್ಷ

11. ಶನೇಶ್ವರನಿಗೆ ಹೆದರಿದ ಕಳ್ಳ !

ಶನೇಶ್ವರನಿಗೆ ಹೆದರಿ ಕಾಲ್ಕಿತ್ತ ಕಳ್ಳ - ದೇವಸ್ಥಾನಕ್ಕೆ ಕದಿಯಲು ಬಂದವನು ಸೈಲೆಂಟ್ ಆಗಿ ವಾಪಸ್​ - ಮೈಸೂರಿನ ದಟ್ಟಗಳ್ಳಿಯ ಶನೇಶ್ವರ ದೇಗುಲದಲ್ಲಿ ನಡೆದ ಘಟನೆ - ಕಳ್ಳನ ಚಲನವಲನ ದೇವಾಲಯದ ಸಿಸಿಟಿವಿಯಲ್ಲಿ ಸೆರೆ

12. ಯುವಕನ ಬರ್ಬರ ಹತ್ಯೆ :

ಹಳೆ ವೈಷಮ್ಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಂದ ಯುವಕನ ಹತ್ಯೆ - ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ -ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸ್ರು  

13. ವಂಚಕ ಅರೆಸ್ಟ್ :

ನಕಲಿ ಆಧಾರ್​​ ಕಾರ್ಡ್​​​​ ಮಾಡಿಸಿಕೊಟ್ಟು ಸರ್ಕಾರದಿಂದ ಮನೆ ಕೊಡಿಸೋದಾಗಿ ವಂಚನೆ  - ಮಹಾನ್​​ ವಂಚಕನನ್ನು ಹೆಡೆಮುರಿಕಟ್ಟಿದ ಹೆಚ್​ಎಎಲ್​ ಪೊಲೀಸ್ರು  - ನಿವೃತ್ತ ಎಸಿಪಿ ಸೇರಿದಂತೆ ಹಲವಾರು ಜನರಿಗೆ ಲಕ್ಷಗಟ್ಟಲೆ ವಂಚಿಸಿದ್ದ  ರಾಜ್​ಕುಮಾರ್​​ ಬಂಧನ

14. ತಿಮ್ಮಕ್ಕನಿಗೆ ಸರ್ಕಾರಿ ಜಮೀನು:

ಕೊನೆಗೂ ಸಾಲು ಮರದ ತಿಮ್ಮಕ್ಕನನ್ನು ಗುರುತಿಸಿದ ರಾಜ್ಯ ಸರ್ಕಾರ - ಗಿಡಗಳನ್ನು ನೆಟ್ಟು ಪೋಷಿಸಿದ ಪರಿಸರವಾದಿಗೆ ಸಿಗಲಿದೆ ಸರ್ಕಾರಿ ಜಮೀನು -  5 ಎಕರೆ ಜಮೀನು, ಮನೆ, ಅಗತ್ಯ ನೆರವು ನೀಡಲಾಗುವುದು ಎಂದ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ

15. ರಾಸುಗಳಿಗೆ ಸೊಳ್ಳೆ ಸಂಕಟ:

ರಾಯಚೂರು ಜಿಲ್ಲೆಯಾದ್ಯಂತ ರಕ್ತ ಹೀರುವ ಸೊಳ್ಳೆಗಳ ಕಾಟ - ಸೊಳ್ಳೆ ಕಿರಿಕಿರಿಯಿಂದ ಜಾನುವಾರುಗಳ ಮೂಕರೋದನೆ - ಹಾಲು ಉತ್ಪಾದನೆಯಲ್ಲೂ ಗಣನೀಯ ಇಳಿಕೆ - ಹೈನೋದ್ಯಮ ನಂಬಿದ್ದ ರೈತರು ಹೈರಾಣ - ದನಗಳ ರಕ್ಷಣೆಗೆ ಸೊಳ್ಳೆ ಪರದೆ ಮೊರೆ ಹೋದ ಜನ

16. ಬೆಂಕಿ ಪೊಟ್ಟಣ ಲಾರಿ ಪಲ್ಟಿ:   

ವಿಜಯಪುರದ ಮುದ್ದೇಬಿಹಾಳ ಬಳಿ ಬೆಂಕಿ ಪೊಟ್ಟಣ ಲಾರಿ ಪಲ್ಟಿ - ಒಳಚರಂಡಿ ಕಾಮಗಾರಿಗೆ ತೋಡಿದ್ದ ಹಳ್ಳಕ್ಕೆ ಬಿದ್ದ ಲಾರಿ - ತಮಿಳನಾಡು ಮೂಲದ ಲಾರಿ ಮುದ್ದೇಬಿಹಾಳಕ್ಕೆ ಬಂದಿದ್ದ ವೇಳೆ ಘಟನೆ

17. ಸತ್ತ ಮೀನುಗಳ ರಾಶಿ:

ಕಾರವಾರದ ರವಿಂದ್ರನಾಥ ಟಾಗೋರ್​ ಬೀಚ್​ನಲ್ಲಿ ರಾಶಿಬಿದ್ದ ಸತ್ತ ಮೀನುಗಳು - ಬೋಟ್​ನಲ್ಲಿದ್ದ ಕೊಳೆತ ಮೀನುಗಳನ್ನು ಸಮುದ್ರದಲ್ಲಿ ಬೀಸಾಕಿ ಹೋದ ಮೀನುಗಾರರು - ಕೊಳೆತ ಮೀನುಗಳಿಂದ ಸಮುದ್ರ ತೀರದಲ್ಲಿ ದುರ್ನಾತ 

18. ಮೊನ್ನೆ ಉದ್ಘಾಟನೆಯಾಯ್ತು, ನಿನ್ನೆ ಕಿತ್ತೋಯ್ತು!

ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಹೋಯ್ತು ರಸ್ತೆ - 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಸ್ತೆ ಕಥೆ ಹರೋಹರ - ಕಳಪೆ ಕಾಮಗಾರಿಯಿಂದ ಬಿರುಕುಬಿಟ್ಟ ಸೇತುವೆ - ಅವ್ಯವಸ್ಥೆ ವಿರುದ್ಧ ಕೊಪ್ಪಳ ಜಿಲ್ಲೆಯ ಮುದ್ಲಾಪೂರ ಗ್ರಾಮಸ್ಥರ ಆಕ್ರೋಶ

19. 80 ಅಡಿ ಬಾವಿಗೆ ಬಿದ್ದಿದ್ದ ಬೆಕ್ಕು ರಕ್ಷಣೆ :

80 ಅಡಿ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಿದ ಬಾಲಕ - ಪ್ರಾಣದ ಹಂಗು ತೊರೆದು ಮಾನವೀಯತೆ ಮೆರೆದ ಬಾಲಕ - ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ‌ ಘಟನೆ - 15 ವರ್ಷದ ಬಾಲಕ ಕೆಲಸಕ್ಕೆ ಹಲವರ ಮೆಚ್ಚುಗೆ 

20. ಚಿರತೆ ಸಾವು:

ತುಮಕೂರಿನಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು - ಕುಣಿಗಲ್ ತಾಲೂಕಿನ ದೊಂಬರಹಟ್ಟಿ ಬಳಿ ಘಟನೆ - ಅರಣ್ಯಾಧಿಕಾರಿಗಳಿಂದ ಪರಿಶೀಲನೆ

21. ಲಾರಿ ಧಗಧಗ :​

ಚಲಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ ರಸ್ತೆಯಲ್ಲೇ ಧಗಧಗ - ಬೆಂಗಳೂರಿನ ಹೊಸೂರು ಮುಖ್ಯರಸ್ತೆಯ ಸಿಲ್ಕ್ ಬೋರ್ಡ್ ಬಳಿ ಅವಘಡ - ಶಾರ್ಟ್ ಸರ್ಕ್ಯೂಟ್'ನಿಂದ ಆವರಿಸಿದ ಬೆಂಕಿಯ ಕೆನ್ನಾಲಿಗೆ

22. ಅಂಗಡಿಗಳ ತೆರವು ಕಾರ್ಯ:

ಕಾರವಾರದ ಮುದಗಾ ಬಂದರು ಪ್ರದೇಶದಲ್ಲಿ ಅಂಗಡಿಗಳ ತೆರವು ಕಾರ್ಯ - ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸ್ತಿದ್ದವರಿಗೆ ಎದುರಾಗಿದೆ ಸಂಕಷ್ಟ - ಸೀಬರ್ಡ್​ ಯೋಜನೆಯಿಂದ ನಿರಾಶ್ರಿತರಾದವರು ಮತ್ತೆ ಕಂಗಾಲು

23. ಈಜಲು ಹೋದ ಬಾಲಕ ನೀರುಪಾಲು:

ತುಂಗಾ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲು - ಶಿವಮೊಗ್ಗದ ಹೊರವಲಯ ತ್ರಿಮೂರ್ತಿ ನಗರದಲ್ಲಿ ಘಟನೆ - ನೀರಿನ ಸೆಳೆತಕ್ಕೆ ಅನೀಶ್ ಸಾವು, ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಶೋಧ

24. ಮಕ್ಕಳ ಅಕ್ಕಿ ಕದ್ದ ಅಧಿಕಾರಿ!

ಅಕ್ಷರ ದಾಸೋಹದ ಅಕ್ಕಿ ಕದ್ದು ಸಿಕ್ಕಿಬಿದ್ದ ಅಧಿಕಾರಿ - 12 ಮೂಟೆ ಅಕ್ಕಿ ಸಾಗಿಸುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಲೋಕೇಶ್ - ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ - ಉಗ್ರಾಣ ಅಧಿಕಾರಿ‌ ಲೋಕೇಶ್​ಗೆ ಗ್ರಾಮಸ್ಥರ ತರಾಟೆ

25. ಇಲ್ಲಿ ಶೌಚಾಲಯವೇ ಇಲ್ಲ! 

ಕಾರವಾರದ ಬೈತಕೋಲ ಮೀನುಗಾರಿಕಾ ಜನವಸತಿ ಪ್ರದೇಶದಲ್ಲಿ ಶೌಚಾಲಯವೇ ಇಲ್ಲ - 90 ಮನೆಗಳಲ್ಲಿ ಟಾಯ್ಲೆಟ್​ ಇಲ್ಲದೆ ಮಹಿಳೆಯರು, ಮಕ್ಕಳ ಪರದಾಟ - ಅಧಿಕಾರಿಗಳೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ

26. ದೇವಸ್ಥಾನದಲ್ಲಿ ಜಟಾಪಟಿ:

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭೂದೇವಿ ದೇವಸ್ಥಾನದಲ್ಲಿ ಜಟಾಪಟಿ - ದೇವಸ್ಥಾನ ಪುರೋಹಿತ ವ್ಯಾಜ್ಯ ವಿಚಾರಕ್ಕೆ ಗಲಾಟೆ - ದೇವಸ್ಥಾನದ ಟ್ರಸ್ಟಿ ಹಾಗೂ ಪುರೋಹಿತ ಕುಟುಂಬಗಳ ಮಧ್ಯೆ ಮಾರಾಮಾರಿ -   ಗಾಯಗೊಂಡು ಆಸ್ಪತ್ರೆ ಸೇರಿದ ನಾಲ್ವರು ಮಹಿಳೆಯರು

27. ಮೂಡಲಗಿ ತಾಲೂಕು ಕೇಂದ್ರಕ್ಕೆ ಪಟ್ಟು:

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೂಡಲಗಿ ಪಟ್ಟಣವನ್ನ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹ - ಒಡೆದ ಗಾಜಿನ ಚೂರುಗಳ ಮೇಲೆ ನಡೆದು ವಿಭಿನ್ನ ಪ್ರತಿಭಟನೆ - ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

28. ಮೀನುಗಳ ಮಾರಣಹೋಮ :

ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ - ರಾಸಾಯನಿಕ ತ್ಯಾಜ್ಯ ಕೆರೆಗೆ ಸೇರಿ ಜಲಚರಗಳ ಸಾವು - ಕೆರೆ ಸ್ವಚ್ಛತೆ ಮಾಡುವಂತೆ ಸ್ಥಳೀಯರ ಆಗ್ರಹ

29. ನೃತ್ಯ ಕಾರಂಜಿಯ ಸೊಬಗು:

ಶ್ರೀರಂಗಪಟ್ಟಣದ ಕೆ.ಆರ್.ಎಸ್ ಬೃಂದಾವನದಲ್ಲಿ ನೃತ್ಯ ಕಾರಂಜಿ - ದಸರಾ ಹಿನ್ನಲೆಯಲ್ಲಿ ಬೃಂದಾವನದಲ್ಲಿದ್ದ ನೃತ್ಯ ಕಾರಂಜಿಗೆ ಧ್ವನಿ ಮತ್ತು ಲೇಸರ್ ಬೆಳಕಿನ ವ್ಯವಸ್ಥೆ - ಹೊಸ ರೂಪದ ನೃತ್ಯ ಕಾರಂಜಿಗೆ ಪ್ರವಾಸಿಗರು ಫುಲ್​ ಫಿದಾ

30. ಹೆಬ್ಬಾವಿನ ಜೊತೆ ಗೋಲ್ಡನ್​ಸ್ಟಾರ್ ಸರಸ:   

ಕೊಲೊಂಬೋದಲ್ಲಿ ಗೋಲ್ಡನ್​ ಸ್ಟಾರ್​​ ಫ್ಯಾಮಿಲಿ - ವಿದೇಶದಲ್ಲಿ ಪತ್ನಿ, ಮಕ್ಕಳೊಂದಿಗೆ ದಸರಾ ರಜಾ ಮಜಾ - ಹೆಬ್ಬಾವಿನ ಜೊತೆ ಗಣೇಶ್​ ಹಾಗೂ ಪುತ್ರನ ಸರಸ - ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​  ಮಾಡಿ ಸಂತಸ ಹಂಚಿಕೊಂಡ ಶಿಲ್ಪಾ ಗಣೇಶ್​

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ