ವಿಮಾನದಿಂದ ಉದುರಿತು ಟನ್’ಗಟ್ಟಲೇ ಚಿನ್ನ..ಅಬ್ಬಾ..!

By Suvarna Web DeskFirst Published Mar 16, 2018, 11:32 AM IST
Highlights

ವಿಮಾನ ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್’ಗಟ್ಟಲೇ ಚಿನ್ನ ರನ್’ ವೇಯಲ್ಲಿ ಚೆಲ್ಲಾ ಪಿಲ್ಲಿಯಾಗಿ  ಬಿದ್ದ ಘಟನೆ ನಡೆದಿದೆ

ರಷ್ಯಾ : ವಿಮಾನ ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್’ಗಟ್ಟಲೇ ಚಿನ್ನ ರನ್’ ವೇಯಲ್ಲಿ ಚೆಲ್ಲಾ ಪಿಲ್ಲಿಯಾಗಿ  ಬಿದ್ದ ಘಟನೆ ರಷ್ಯಾದಲ್ಲಿ ನಡೆದಿದೆ. ವಿಮಾನದ ಸಿಬ್ಬಂದಿ ನಿರ್ಲಕ್ಷ್ಯದಿಂದ  ಘಟನೆ ಸಂಭವಿಸಿದೆ. ವಜ್ರ , ಪ್ಲಾಟಿನಂ, ಹಾಗೂ ಚಿನ್ನವನ್ನು ಸಾಗಿಸುತ್ತಿದ್ದ ವಿಮಾನದ ಬಾಗಿಲು ತೆರೆದು ನೆಲಕ್ಕೆ ಕೋಟ್ಯಂತರ ಮೌಲ್ಯದ ಬೆಲೆಬಾಳುವ ಲೋಹಗಳು ಸುರಿದಿದೆ.   

ಸುಮಾರು 3 ಟನ್’ನಷ್ಟು ಚಿನ್ನ ರನ್ ವೇ ಯ ಮೇಲೆ ಚೆಲ್ಲಾ ಪಿಲ್ಲಿಯಾಗಿದೆ. ಈ ಸಬಂಧ ಇದೀಗ ಇಲ್ಲಿನ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ರಷ್ಯಾದ  ಯಾಕುಟ್ಸ್ಕ್ ನಗರದ ಬಳಿಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.

ಎಎನ್ 12 ವಿಮಾನದಲ್ಲಿ 9ಕ್ಕೂ ಅಧಿಕ ಟನ್ ಚಿನ್ನ ಹಾಗೂ ಇತರೆ ಬೆಲೆ ಬಾಳುವ ಲೋಹವನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

 

It's -21C in Yakutia, sunny, we expect showers of diamond, platinum and gold... Plane loses its $368 million cargo; gems and precious metals rain over Russia’s coldest region as police and secret services stage emergency search https://t.co/NsUeOWxZf5 pic.twitter.com/8OXd6Al9is

— The Siberian Times (@siberian_times)
click me!