ಕಾರಿನಲ್ಲಿದ್ದ ಬರೋಬ್ಬರಿ 2.5 ಕೆಜಿ ಚಿನ್ನಾಭರಣ ವಶ

By Suvarna Web DeskFirst Published Mar 31, 2018, 10:03 AM IST
Highlights

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವ ವೇಳೆ ಬೆಂಗಳೂರು ವ್ಯಕ್ತಿಯ ಕಾರಿನಲ್ಲಿದ್ದ 2.5 ಕೇಜಿ ಚಿನ್ನಾಭರಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸೂಲಿಬೆಲೆ ರಸ್ತೆಯ ಬಾಲೇಪುರ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ.

ದೇವನಹಳ್ಳಿ : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವ ವೇಳೆ ಬೆಂಗಳೂರು ವ್ಯಕ್ತಿಯ ಕಾರಿನಲ್ಲಿದ್ದ 2.5 ಕೇಜಿ ಚಿನ್ನಾಭರಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸೂಲಿಬೆಲೆ ರಸ್ತೆಯ ಬಾಲೇಪುರ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ.

 ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರದ ಬಳಿ ಶುಕ್ರವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ತಪಾಸಣಾ ಅಧಿಕಾರಿಗಳು ಮೂರು ಕಾರುಗಳನ್ನು ನಿಲ್ಲಿಸಿ ತಪಾಸಣೆ ಮಾಡಿದರು.  ಈ ಸಂದರ್ಭದಲ್ಲಿ 2.5 ಕೆ .ಜಿ. ಚಿನ್ನದ ಆಭರಣಗಳು ಸೇರಿದಂತೆ, ನಗದು ಹಾಗೂ ಸೀರೆಗಳನ್ನು ವಾಹನಗಳ ಸಮೇತ ವಶಪಡಿಸಿಕೊಂಡರು.

ಕಾರಿನಲ್ಲದ್ದವ ರನ್ನು ವಶಕ್ಕೆ ಪಡೆದು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಹಾಗೂ ಪೊಲೀಸ್ ಎಸ್ಪಿ ಉಮಾಶಂಕರ್ ಎಸ್. ಗುಳೇದ್ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಇದು ಪ್ರಥಮ ಬಾರಿಗೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯಾಗಿದೆ ಎಂದು ತಿಳಿಸಿದರು.

 ಸೂಲಿಬೆಲೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬೆಂಗಳೂರು ನಗರ್ತರ ಪೇಟೆಯ ಸಗಟು ಆಭರಣ ವ್ಯಾಪಾರಿ ಪಾರಸ್‌ಮಲ್ ಜೈನ್ ಎಂಬುವರ ಕಾರಿನಲ್ಲಿ 2.5 ಕೆಜಿ ಚಿನ್ನದ ಆಭರಣಗಳು ಹಾಗೂ 40,200 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!