ಚಿನ್ನ ಕೊಳ್ಳುವ ಗ್ರಾಹಕರಿಗೆ ಶುಭ ಸುದ್ದಿ

By Suvarna Web DeskFirst Published May 7, 2017, 10:58 AM IST
Highlights

ಅಮೆರಿಕಾ ಸರ್ಕಾರವೂ ಕಳೆದ ವರ್ಷ ಬಡ್ಡಿದರ ಏರಿಸಿದ್ದು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಸಕರಾತ್ಮಕ ಪರಿಣಾಮವಾಗಿ ಪರಿಣಮಿಸಿದೆ ಎನ್ನಲಾಗಿದೆ.

ಲಂಡನ್(ಮೇ.07): ಚಿನ್ನ ಕೊಳ್ಳುವವರಿಗೆ ಶುಭ ಸುದ್ದಿ ಬಂದಿದೆ. ಅಮೆರಿಕಾದಲ್ಲಿ ಕಳೆದ ವರ್ಷ ಬಡ್ಡಿ ದರವನ್ನು ಏರಿಸಿದ ಹಿನ್ನಲೆ ಹಾಗೂ ಯೂರೋಪ್'ನಲ್ಲಿ ಆದ ರಾಜಕೀಯ ಬೆಳವಣಿಗೆಯ ಕಾರಣದಿಂದ ಚಿನ್ನದ ಬೆಲೆ ಕಡಿಮೆಯಾಗಿದೆ. ಪ್ರತಿ 10 ಗ್ರಾಂ'ಗೆ  125 ರೂ. ಇಳಿಕೆಯಾಗಿದ್ದು,ಪ್ರಸ್ತುತ ಬೆಲೆ 28,725 ರೂ.ಇದೆ. ಕಳೆದ 6 ವಾರಗಳಿಂದ ಚಿನ್ನದ ಬೆಲೆಯು 700 ರೂ. ಕಡಿಮೆಯಾಗಿದ್ದು, ಇದು ದಾಖಲೆ ಎಂದೇ ಹೇಳಬಹುದು.

ಅಮೆರಿಕಾ ಸರ್ಕಾರವೂ ಕಳೆದ ವರ್ಷ ಬಡ್ಡಿದರ ಏರಿಸಿದ್ದು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಸಕರಾತ್ಮಕ ಪರಿಣಾಮವಾಗಿ ಪರಿಣಮಿಸಿದೆ ಎನ್ನಲಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 225 ರೂ. ಕಡಿಮೆಯಾಗಿ 38,575 ರೂ. ಇದೆ. ಬೆಳ್ಳಿ ಕೂಡ ಕಳೆದ ಕೆಲ ದಿನಗಳಿಂದ ಸಾವಿರಕ್ಕೂ ಹೆಚ್ಚು ರೂ. ಇಳಿಕೆಯಾಗಿದೆ.

click me!