ಮೈಸೂರಿನ ಮೂರು ಕಡೆ ಚಿನ್ನದ ನಿಕ್ಷೇಪ

By Suvarna Web DeskFirst Published Jan 7, 2018, 1:49 PM IST
Highlights

ಮೈಸೂರಿನಲ್ಲಿ ಚಿನ್ನ ಮತ್ತು ತಮಿಳುನಾಡಿನತಿರುವೂರು ಪ್ರದೇಶದಲ್ಲಿ ಕಬ್ಬಿಣದನಿಕ್ಷೇಪಗಳು ಕಂಡುಬಂದಿದ್ದು, ಶೋಧಕಾರ್ಯ ನಡೆಸಿ ಅದಿರಿನಗುಣಮಟ್ಟ ಮತ್ತುಪ್ರಮಾಣದ ಕುರಿತುವರದಿ ಸಲ್ಲಿಸುವಂತೆ ಕೆಐಒಸಿಎಲ್‌ಗೆ ಸೂಚಿಸಲಾಗಿದೆ ಎಂದು ಕೇಂದ್ರಉಕ್ಕು ಸಚಿವ ಚೌಧರಿಬಿರೇಂದರ್ ಸಿಂಗ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎನ್ನುವ ವಿಚಾರ ತೀವ್ರ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ನಂಜನಗೂಡು, ಎಚ್.ಡಿ.ಕೋಟೆ ಹಾಗೂ ಮೈಸೂರು ತಾಲೂಕಿನ ಗಡಿಯಲ್ಲಿ ಈ ನಿಕ್ಷೇಪ ಪತ್ತೆಯಾಗಿದೆ. ಮೈಸೂರಿಗೆ ಸಮೀಪದ ಹಾಸನ ಜಿಲ್ಲೆಯಲ್ಲೂ ಚಿನ್ನದ ನಿಕ್ಷೇಪ ಇದ್ದು, ಈ ಹಿಂದೆ ಅಲ್ಲಿ ಚಿನ್ನದ ಗಣಿಗಾರಿಕೆಯೂ ನಡೆಯುತ್ತಿತ್ತು.

ಮೈಸೂರಿನಲ್ಲಿ ಚಿನ್ನ ಮತ್ತು ತಮಿಳುನಾಡಿನ ತಿರುವೂರು ಪ್ರದೇಶದಲ್ಲಿ ಕಬ್ಬಿಣದ ನಿಕ್ಷೇಪಗಳು ಕಂಡುಬಂದಿದ್ದು, ಶೋಧ ಕಾರ್ಯ ನಡೆಸಿ ಅದಿರಿನ ಗುಣಮಟ್ಟ ಮತ್ತು ಪ್ರಮಾಣದ ಕುರಿತು ವರದಿ ಸಲ್ಲಿಸುವಂತೆ ಕೆಐಒಸಿಎಲ್‌ಗೆ ಸೂಚಿಸಲಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದರ್ ಸಿಂಗ್ ತಿಳಿಸಿದ್ದಾರೆ.  ಸುದ್ದಿಗಾರರ ಜತೆ ಮಾತನಾಡಿ, ಕಬ್ಬಿಣ ಅದಿರು ಲಭ್ಯವಾದರೆ ಮಂಗಳೂರಿನ ಕೆಐಒಸಿಎಲ್‌ನ ಕಾರ್ಯಕ್ಷಮತೆ ಇನ್ನಷ್ಟು ವಿಸ್ತರಿಸಲು ಅನುಕೂಲವಾಗಲಿದೆ ಎಂದರು.

 

click me!