
ನವದೆಹಲಿ(ಏ.27): ಭಾರತದಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆಯಿರುವುದನ್ನು ಗಮನಿಸಿರುವ ಆಲಿಬಾಬಾ ಬೆಂಬಲಿತ ಪೇಟಿಎಂ, 1 ರು.ಗೂ ಚಿನ್ನ ಖರೀದಿ ಮಾಡಬಹುದಾದ ‘ಡಿಜಿಟಲ್ ಚಿನ್ನ’ ಮಾರಾಟ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಅದಕ್ಕಾಗಿ ಅದು ಚಿನ್ನ ಶುದ್ಧೀಕರಿಸುವ ಎಂಎಂಟಿಸಿ-ಪಿಎಎಂಪಿಯೊಂದಿಗೆ ಸಹಭಾಗಿತ್ವ ಪಡೆದಿದ್ದು, ಎಲೆಕ್ಟ್ರಾನಿಕ್ ವೇದಿಕೆ ಮೂಲಕ ಚಿನ್ನದ ಮೇಲೆ ಹೂಡಿಕೆಗೆ ಅಥವಾ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.
ನಿಮ್ಮಲ್ಲಿರುವ ಪೇಟಿಎಂ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿ 24ಕೆ 999.9 ಶುದ್ಧ ಚಿನ್ನವನ್ನು ಆನ್‌ಲೈನ್ ಮೂಲಕ ಖರೀದಿಸಿ, ಎಂಎಂಟಿಸಿ-ಪಿಎಎಂಪಿಯಲ್ಲಿ ಉಚಿತವಾಗಿ ಭದ್ರವಾಗಿ ಠೇವಣಿಯಿಡಬಹುದು. ವಿಶೇಷವೆಂದರೆ, ಈ ಮೂಲಕ ನೀವು ಚಿನ್ನದ ಮೇಲೆ 1ರಿಂದ ಹೂಡಿಕೆ ಆರಂಭಿಸಬಹುದು. ಅಗತ್ಯ ಬಿದ್ದಾಗ ಚಿನ್ನ ನಾಣ್ಯಗಳ ರೂಪದಲ್ಲಿ ಮನೆಗೇ ತರಿಸಿಕೊಳ್ಳಬಹುದು ಅಥವಾ ಆನ್‌ಲೈನ್ ಮೂಲಕವೇ ಎಂಎಂಟಿಸಿ-ಪಿಎಎಂಪಿಗೆ ಮರು ಮಾರಾಟ ಮಾಡಬಹುದು. ಮಾರಾಟ ಮಾಡಿದ ಚಿನ್ನದ ವೌಲ್ಯ ಬಳಕೆದಾರನ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.