ಇಬ್ಬರು ಸಚಿವರಿಗೆ ಸಂಪುಟದಿಂದ ಕೋಕ್

Published : Sep 24, 2018, 02:23 PM IST
ಇಬ್ಬರು ಸಚಿವರಿಗೆ ಸಂಪುಟದಿಂದ ಕೋಕ್

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಇಬ್ಬರು ಸಚಿವರಿಗೆ ಕೋಕ್ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದಲೇ ಮಾಹಿತಿ ಹೊರಬಿದ್ದಿದೆ. 

ಪಣಜಿ :  ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಸದ್ಯ  ಅನಾರೋಗ್ಯಕ್ಕೆ  ಒಳಗಾಗಿದ್ದು ಇದೇ ಸಂದರ್ಭದಲ್ಲಿ ಗೋವಾ ಸಚಿವ ಸಂಪುಟವನ್ನು ಪುನಾರಚನೆ ಮಾಡಲಾಗಿದೆ. 

ಈ ವೇಳೆ ಮನೋಹರ್ ಪರ್ರಿಕರ್ ಸಂಪುಟದಿಂದ ಇಬ್ಬರು ಸಚಿವರನ್ನು ಕೈ ಬಿಡಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ. 

ಸಚಿವರಾದ ಫ್ರಾನ್ಸಿಸ್ ಡಿಸೋಜಾ ಮತ್ತು ಪಾಂಡುರಂಗ ಮಡಕೈಕರ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. 

ಇನ್ನು ಇಬ್ಬರಿಂದ ತೆರವಾದ ಸ್ಥಾನಕ್ಕೆ ನೀಲೇಶ್ ಕಬ್ರಾಲ್ ಮತ್ತು ಮಿಲಿಂದ್ ನಾಯ್ಕ್ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಗೋವಾ ಸಂಪುಟ ಪುನಾರಚನೆ ಬಗ್ಗೆ ಮಾಹಿತಿ ನೀಡಿದ್ದು, ಗೋವಾ ಮುಖ್ಯಮಂತ್ರಿಯಾಗಿ ಪರ್ರಿಕರ್ ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು. 

ಸದ್ಯ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ವೃದ್ಧ ದಂಪತಿಯನ್ನ ಒಂದುಗೂಡಿಸಿದ ಲೋಕ ಅದಾಲತ್!
ಮೋನಿಕಾ ಜೊತೆ ಪೊಲೀಸಪ್ಪನ ಅಕ್ರಮ ಸಂಬಂಧ ಕೇಸ್‌ಗೆ ಟ್ವಿಸ್ಟ್, ಕಿಚುಕಿಚುಮಾ ಎಂದ ರೀಲ್ಸ್ ರಾಣಿ