ಗೋವಾ ಸಿಎಂ ಮನೋಹರ್ ಪರ್ರಿಕರ್’ಗೆ ಕ್ಯಾನ್ಸರ್ ಇದ್ದದ್ದು ನಿಜವೇ?

By Suvarna Web DeskFirst Published Mar 5, 2018, 9:33 AM IST
Highlights

ಗೋವಾ ಮುಖ್ಯಮಂತ್ರಿ ಮನೋಹರ್ ಪರ‌್ರಿಕರ್ ಅವರ ಅನಾರೋಗ್ಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಗಾಳಿಸುದ್ದಿ ಹರಿದಾಡುತ್ತಿದೆ. ‘ಪರ‌್ರಿಕರ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅದು ಈಗ ನಾಲ್ಕನೇ ಹಂತ ತಲುಪಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ಹೇಳಲಾಗಿತ್ತು.

ಬೆಂಗಳೂರು (ಮಾ. 05): ಗೋವಾ ಮುಖ್ಯಮಂತ್ರಿ ಮನೋಹರ್ ಪರ‌್ರಿಕರ್ ಅವರ ಅನಾರೋಗ್ಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಗಾಳಿಸುದ್ದಿ ಹರಿದಾಡುತ್ತಿದೆ. ‘ಪರ‌್ರಿಕರ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅದು ಈಗ ನಾಲ್ಕನೇ ಹಂತ ತಲುಪಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ಹೇಳಲಾಗಿತ್ತು.

ಇಂತಹ  ಸುದ್ದಿಗಳು ಮಾಧ್ಯಮ ಗಳಲ್ಲಿ  ಮುಂಬೈನ ಲೀಲಾವತಿ ಆಸ್ಪತ್ರೆಯು ಪರ‌್ರಿಕರ್ ಆರೋಗ್ಯ ಕುರಿತ ಹೇಳಿಕೆ  ಬಿಡುಗಡೆ ಮಾಡಿ ಸ್ಪಷ್ಟೀಕರಣ ನೀಡಿತು. ಆ ಹೇಳಿಕೆಯಲ್ಲಿ  ‘ಪರ‌್ರಿಕರ್ ಅವರ ಅರೋಗ್ಯ  ವಿಚಾರವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ  ಸುಳ್ಳು. ನಾವು ಪದೇ ಪದೇ  ಹೇಳುತ್ತಿದ್ದೇವೆ ಅವರ ಆರೋಗ್ಯದ ಸ್ಥಿತಿ ಚೆನ್ನಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿ ಎಲ್ಲಾ ಕುರಿತ ವದಂತಿಗಳನ್ನು ಅಲ್ಲಗೆಳೆದಿತ್ತು. ಆದರೆ ಹೇಳಿಕೆಯಲ್ಲಿ  ಪರ‌್ರಿಕರ್ ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿಲ್ಲ. ಫೆ.15 ರಂದು ಸಣ್ಣ ಪ್ರಮಾಣದ ಮೇದೋಜೀರಕ ಗ್ರಂಥಿ ಸಮಸ್ಯೆಯಿಂದ ಪರ‌್ರಿಕರ್ ಲೀಲಾವತಿ ಆಸ್ಪತ್ರೆಗೆ  ದಾಖಲಾಗಿದ್ದರು. ಪ್ರಸ್ತುತ ಪರ‌್ರಿಕರ್ ಮುಂಬೈ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಬಳಿಕ
ಪುನಃ ಅನಾರೋಗ್ಯದಿಂದ ಗೋವಾ ಆಸ್ಪತ್ರೆಗೂ ದಾಖಲಾಗಿದ್ದರು. ಈಗ ಅವರು ಗುಣಮುಖರಾಗಿದ್ದು, ಮನೆಯಿಂದಲೇ ವಿಶ್ರಾಂತಿ ಪಡೆದು ಕೆಲಸ  ನಿರ್ವಹಿಸುತ್ತಿದ್ದಾರೆ.   

click me!