ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಎಂದ ಕಾಂಗ್ರೆಸ್

By Suvarna Web DeskFirst Published Mar 17, 2018, 3:38 PM IST
Highlights

ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮತಯಂತ್ರದ ಮೇಲೆ ಅನುಮಾನ ಹೆಚ್ಚಾಗುತ್ತಿದ್ದು ಸೋತ ಪಕ್ಷಗಳು ತಮಗೆ ಹಳೆಯ ಮಾದರಿಯ ಬ್ಯಾಲೆಟ್ ಪೇಪರ್ ಬೇಕೆಂದು ಪಟ್ಟು ಹಿಡಿಯುತ್ತಿವೆ. ಈಗ ಅದಕ್ಕಾಗಿ ಪದೇ ಪದೆ ಕೂಗು ಹಾಕುತ್ತಿರುವುದು ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್.

ನವದೆಹಲಿ(ಮಾ.17): ಹದಿನೇಳನೆ ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ತಮ್ಮ ದಾಳಗಳನ್ನು ಉದುರಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮತಯಂತ್ರದ ಮೇಲೆ ಅನುಮಾನ ಹೆಚ್ಚಾಗುತ್ತಿದ್ದು ಸೋತ ಪಕ್ಷಗಳು ತಮಗೆ ಹಳೆಯ ಮಾದರಿಯ ಬ್ಯಾಲೆಟ್ ಪೇಪರ್ ಬೇಕೆಂದು ಪಟ್ಟು ಹಿಡಿಯುತ್ತಿವೆ. ಈಗ ಅದಕ್ಕಾಗಿ ಪದೇ ಪದೆ ಕೂಗು ಹಾಕುತ್ತಿರುವುದು ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್.

ಕಾಂಗ್ರೆಸ್ ಪಕ್ಷವು ನವದೆಹಲಿಯ ಮುಖ್ಯ ಕಚೇರಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ  ಇಂದು ಸಭೆ ಕೈಗೊಂಡು ಹಲವು ನಿರ್ಣಯಗಳನ್ನು ಮಂಡಿಸಿದ್ದು ಅದರಲ್ಲಿ ಬ್ಯಾಲೆಟ್ ಪೇಪರ್ ಬಗ್ಗೆ ಪ್ರಸ್ತಾಪ ಮಾಡಿದೆ. ಚುನಾವಣಾ ಆಯೋಗವು ಇವಿಎಂ'ಗಳ ಮೇಲೆ ಅನುಮಾನ ವ್ಯಕ್ತವಾಗುತ್ತಿರುವ ಕಾರಣ ಬ್ಯಾಲೆಟ್ ಪೇಪರ್ ಬಳಸಬೇಕೆಂದು ತಿಳಿಸಿದೆ.

2017 ಹಾಗೂ ಈ ವರ್ಷ ನಡೆದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ವರ್ಷ ಕಾಂಗ್ರೆಸ್ ಪಕ್ಷ ಗುಜರಾತ್ ಚುನಾವಣೆಯಲ್ಲಿ ಶೇ.25ರಷ್ಟು ಬ್ಯಾಲೆಟ್ ಬಳಸಬೇಕೆಂದು ಸುಪ್ರೀಂ ಕೋರ್ಟ್'ಗೆ ಮನವಿ ಸಲ್ಲಿಸಿತ್ತು. ಆದರೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಬಿ'ಎಸ್'ಪಿ, ಎಸ್'ಪಿ ಸೇರಿದಂತೆ ಅನೇಕ  ಪಕ್ಷಗಳು ಬ್ಯಾಲೆಟ್ ಪೇಪರ್ ಪರ ಬ್ಯಾಟಿಂಗ್ ನಡೆಸುತ್ತಿವೆ. 

click me!