ಮಕ್ಕಳು ಸ್ಕೂಟರ್ ಚಲಾಯಿಸಿದರೆ ಪೋಷಕರಿಗೆ ಗಿಫ್ಟ್ !

By Web DeskFirst Published Aug 31, 2018, 4:54 PM IST
Highlights

ಅಪರಾಧವು  1 ಸಾವಿರ ರೂ. ದಂಡ ಒಳಗೊಂಡಿದ್ದು ದಂಡ ಪಾವತಿಸಲು ವಿಫಲವಾದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಅಹಮದಾಬಾದ್ [ಆ.31]:  ಪರವಾನಗಿ ಇಲ್ಲದೆ ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಚಲಾಯಿಸಿದ್ದ ಕಾರಣಕ್ಕಾಗಿ 25 ಪೋಷಕರ ವಿರುದ್ಧ ಅಹಮದಾಬಾದಿನ ಸಂಚಾರಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ನವರಂಗ್ ಪುರ, ನಾರಾಯಣ ಪುರ, ಗುಜರಾತ್ ವಿವಿ, ಮೆಮ್ ನಗರ್ ಪ್ರದೇಶದಲ್ಲಿ 15 ರಿಂದ 18 ವಯಸ್ಸಿನ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸಿದಕ್ಕಾಗಿ ಮೋಟಾರು ವಾಹನ ಕಾಯಿದೆ ಅನ್ವಯ ಎಫ್ ಐ ಆರ್ ದಾಖಲಿಸಲಾಗಿದೆ.

ಅಪರಾಧವು 1 ಸಾವಿರ ರೂ. ದಂಡ ಒಳಗೊಂಡಿದ್ದು ದಂಡ ಪಾವತಿಸಲು ವಿಫಲವಾದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡಬಾರದೆಂಬ ಕಾರಣಕ್ಕಾಗಿ ಈ ರೀತಿಯ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿವಿಧ ಕಡೆ ವಿಸ್ತರಿಸಲಾಗುವುದು ಎಂದು ಸಂಚಾರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

click me!