Padma Awards 2022:  ಪದ್ಮವಿಭೂಷಣ ರಾವತ್‌, ಪದ್ಮಶ್ರೀ ಸಿದ್ದಲಿಂಗಯ್ಯ... ಸಾಧಕರಿಗೆ ಗೌರವ

By Suvarna NewsFirst Published Jan 25, 2022, 8:43 PM IST
Highlights

* ಪದ್ಮ ಪುರಸ್ಕಾರ ಪ್ರಕಟ
* ಕರ್ನಾಟಕದ ಐವರು ಸಾಧಕರಿಗೆ ಪುರಸ್ಕಾರ
*  ಕೃಷಿ ಕ್ಷೇತ್ರದಿಂದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಗೌರವ
* ಜನರಲ್ ಬಿಪಿನ್ ರಾವತ್ ಪದ್ಮವಿಭೂಷಣ

ನವದೆಹಲಿ(ಜ. 25) ಸಾಧಕರಿಗೆ ಪದ್ಮ ಪುರಸ್ಕಾರ (Padma Awards announced 2022) ಘೋಷಣೆಯಾಗಿದೆ. 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಪುರಸ್ಕಾರಕ್ಕೆ  ವಿವಿಧ ಕ್ಷೇತ್ರದ ಸಾಧಕರು ಪಾತ್ರವಾಗಿದ್ದಾರೆ.

ಕರ್ನಾಟಕಕ್ಕೆ (Karnataka) ಐವರು ಸಾಧಕರು ಪದ್ಮ ಪ್ರಶಸ್ತಿಗೆ ಭಾಜನವಾಗಿದ್ದಾರೆ.  ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ತಂತ್ರಜ್ಞಾನ - ಪದ್ಮಶ್ರೀ), ಎಚ್.ಆರ್.ಕೇಶವಮೂರ್ತಿ (ಕಲೆ - ಪದ್ಮಶ್ರೀ), ಅಬ್ದುಲ್ ಖಾದರ್ ನಾಡಕಟ್ಟಿನ್ - (ಆವಿಷ್ಕಾರ - ಪದ್ಮಶ್ರೀ), ಅಮೈ ಮಹಾಲಿಂಗ ನಾಯ್ಕ (ಕೃಷಿ - ಪದ್ಮಶ್ರೀ), ಸಿದ್ದಲಿಂಗಯ್ಯ (ಮರಣೋತ್ತರ) ( ಸಾಹಿತ್ಯ, ಶಿಕ್ಷಣ - ಪದ್ಮಶ್ರೀ)   ಗೌರವಕ್ಕೆ ಪಾತ್ರವಾಗಿದ್ದಾರೆ.

Padma Awards; ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

ಅಬ್ದುಲ್ ಖಾದರ್ ನಡಕಟ್ಟಿನ ಅವರು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನವರು . ಇವರ ಬಗ್ಗೆ 2016ರಲ್ಲಿ ಸುವರ್ಣ ನ್ಯೂಸ್ ಸಾಕ್ಷ್ಯಚಿತ್ರ ಪ್ರಸಾರ ಮಾಡಿತ್ತು. ಹೆಲಿಕಾಪ್ಟರ್ ಅವಘಡದಲ್ಲಿ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಅವರಿಗೆ ಪದ್ಮವಿಭೂಷಣ ಗೌರವ ನೀಡಲಾಗಿದೆ.  ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ (Kalyan Singh) ಪದ್ಮವಿಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ. 

 

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ,ಗೂಗಲ್ ಸಿಇಒ ಸುಂದರ್ ಪಿಚೈ, SII ಎಂಡಿ ಪೂನಾವಾಲಾ, ಕೊರೋನಾ ಲಸಿಕೆ ಕೋವಾಕ್ಸೀನ್ ಯತಾರಕ ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ, ಸಹ ಸಂಸ್ಥಾಪಕಿ ಸುಚೇತಾ ಎಲ್ಲಾ ಪದ್ಮಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ.  ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಪದ್ಮಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ.

ಧಾರವಾಡ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ ಬಿತ್ತನೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪದ್ಮಶ್ರೀವರೆಗೆ ಕರೆದುಕೊಂಡು ಹೋಗಿದೆ. ನಡಕಟ್ಟಿನ್  ಕೂರಿಗೆ ಎಂದೇ ಹೆಸರು  ಖ್ಯಾತಿ. 

ಬಿತ್ತನೆ ಕೂರಿಗೆ ಸಂಶೋಧನೆಯಿಂದಲೇ ಪರಿಚಿತರಾದವರು. ಬಿತ್ತನೆ ಸಮಯದಲ್ಲಿ ಎದುರಾಗುವ ಸಮಸ್ಯೆ  ನಿವಾರಣೆ ಮಾಡುವ ಕೂರಿಗೆ ಸಂಶೋಧಿಸಿ ಪರಿಚಯಿಸಿದರು. ಇದು ಅಲ್ಲದೇ ಅನೇಕ ಕೃಷಿ ಉಪಕರಣ ಕೊಡುಗೆಯಾಗಿ ನೀಡಿದರು.

ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅವರ ತುಡಿತವೇ ಈ ಎಲ್ಲ ಸಂಶೋಧನೆಗಳ ಮೂಲ.  ಹುಣಸೆ ಹಣ್ಣಿನ ಬೀಜ ಬೇರ್ಪಡಿಸುವ ಯಂತ್ರ,  ಕಟಾವು ಮಾಡಿದ ಗಿಡಗಳ ಕಾಂಡವನ್ನು ಜಮೀನಿನಲ್ಲಿಯೇ ಹುಡಿ ಮಾಡಿ ಗೊಬ್ಬರವನ್ನಾಗಿಸುವ ಯಂತ್ರಗಳನ್ನು ತಾವೇ ಸಂಶೋಧಿಸಿ ನೀಡಿದರು. 

 

ಕೃಷಿ ವಿಜ್ಞಾನಿ ಅಯ್ಯಪ್ಪನ್: 

ನ್ಯಾಶನಲ್ ಅಕಾಡೆಮ್ ಆಫ್ ಅಗ್ರಿಕಲ್ಪರಲ್ ಸೈನ್ಸ್ ನ ಸ್ಕಾಲರ್ ಕೃಷಿ ವಿಜ್ಞಾನಿ  ಎಸ್. ಅಯ್ಯಪನ್  ಜಿಯಾಲೋಜಿಲ್ ಸೊಸೈಟಿಯಿಂದ ಚಿನ್ನದ ಪದಕಕ್ಕೆ ಭಾಜನವಾರದರು.  ಜೀವ ವಿಜ್ಞಾನ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ವಿಜ್ಞಾನಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ.

ಛಲವೊಂದಿದ್ದರೆ ಎನನ್ನೂ ಸಾಧಿಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ(Amai Mahalinga Naik) ಅವರೇ ಸಾಕ್ಷಿ. ಬೋಳುಗುಡ್ಡೆಯಲ್ಲಿ ಸುರಂಗ ನಿರ್ಮಿಸಿ, ನೀರು ಹರಿಸಿ ಬಂಗಾರ ಬೆಳೆದ ಭಗೀರಥ. ಶಾಲೆ, ಕಾಲೇಜುಗಳಿಗೆ ಹೋಗದಿದ್ದರೂ, ನೀರನೆಮ್ಮದಿಯನ್ನು ಕಂಡು ಪ್ರಗತಿಪರ ಕೃಷಿಕರೆನಿಸಿಕೊಂಡವರು. ಮಹಾಲಿಂಗ ನಾಯ್ಕರ ಸಾಧನೆ ಮನ್ನಿಸಿ ಅವರನ್ನು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (Padma Shri Award) ಅರಸಿ ಬಂದಿದೆ.

ಹೌದು..ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಗಡಿನಾಡು ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರಿಗೆ ಕೃಷಿ(Agriculture) ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.    ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ, ಪ್ರಮೋದ್ ಭಗತ್, ವಂದನಾ ಕಟಾರಿಯಾ, ಗಾಯಕ ಸೋನು ನಿಗಮ್ ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿದ್ದಾರೆ. 

click me!