Karnataka Congress ಎಂಬಿ ಪಾಟೀಲ್‌ಗೆ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ, ಕಾಂಗ್ರೆಸ್ ತಂತ್ರ, ಸಿದ್ದುಗೆ ಮೇಲುಗೈ

By Suvarna NewsFirst Published Jan 25, 2022, 7:55 PM IST
Highlights

ಎಂ.ಬಿ ಪಾಟೀಲ್ ಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಹಿಂದಿದೆಯಾ ಲಿಂಗಾಯತರ ಮತ ಸೆಳೆಯುವ  ತಂತ್ರ..
ಲಿಂಗಾಯತರ ನಾಯಕರಾಗಿ ಹೊರಹೊಮ್ಮಲು ರೇಸ್ ನಲ್ಲಿರುವ ಎಂ.ಬಿ.ಪಾಟೀಲ್..
ಚುನಾವಣೆಗೆ ಒಂದು ವರ್ಷವಿರುವಾಗಲೇ ಕಾಂಗ್ರೆಸ್ ನಲ್ಲಿ ಜಾತಿ ಸಮೀಕರಣ..
ಲಿಂಗಾಯತ ಸಮುದಾಯವನ್ನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾ ಕೈ ಪಾಳೆಯ..?

ಬೆಂಗಳೂರು, (ಜ.25): ಮಾಜಿ ಸಚಿವ ಹಾಲಿ ಶಾಕಸ ಎಂ.ಬಿ.ಪಾಟೀಲ್ (MB Patil) ಅವರನ್ನು ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಎಐಸಿಸಿ ಪ್ರಧಾನ‌ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು (ಮಂಗಳವಾರ) ಈ‌ ಮಹತ್ವದ ಆದೇಶ ಹೊರಡಿಸಿದ್ದು, ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಇರುವಾಗಲೇ ಪ್ರಬಲ ಲಿಂಗಾಯಿತ ಸಮುದಾಯಕ್ಕೆ ಸೇರಿದ ಎಂ.ಬಿ.ಪಾಟೀಲ್ ಗೆ ಈ ಸ್ಥಾನ ನೀಡಿರುವುದರಿಂದ ಲಿಂಗಾಯಿತ ಮತಬ್ಯಾಂಕ್ ಓಲೈಕೆಗೆ ಮುಂದಾಗಿದೆ.

Karnataka Politics ಎಂ.ಬಿ.ಪಾಟೀಲ್‌ಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ, ಡಿಕೆಶಿ, ಸಿದ್ದುಗೆ ಸವಾಲು

ಯಡಿಯೂರಪ್ಪ ಮುಖದ ಮೇಲೆ ಲಿಂಗಾಯತ ಮತಗಳು ಬಿಜೆಪಿ ಪಾಲಾಗುತ್ತಿವೆ. ಇದೀಗ ಬಿಎಸ್‌ವೈ ಅವರನ್ನ ಸಿಎಂ ಕುರ್ಚಿಯಿಂದ ಇಳಿಸಿರುವುದು ಸಮುದಾಯಕ್ಕೆ ಬೇಸರ ತರಿಸಿದೆ.

ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ ಇದರ ಮಧ್ಯೆ ಎಂ.ಬಿ ಪಾಟೀಲ್ ಅವರಿಗೆ  ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಲಿಂಗಾಯತರ ಮತ ಸೆಳೆಯುವ  ತಂತ್ರ ಹೆಣೆದಿದೆ ಎನ್ನಲಾಗಿದೆ.

ಚುನಾವಣೆಗೆ ಒಂದು ವರ್ಷವಿರುವಾಗಲೇ ಕಾಂಗ್ರೆಸ್‌ ಜಾತಿ ಸಮೀಕರಣಕ್ಕೆ ಕೈಹಾಕಿದ್ದು, ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ಸಮುದಾಯಗಳ ಜಾತಿ ಸಮೀಕರಣದಲ್ಲಿ ಕಾಂಗ್ರೆಸ್ ನಿರತರಾಗಿದೆ.

ಈಗಾಗಲೇ ಒಕ್ಕಲಿಗ ಸಮುದಾಯದ ಡಿ.ಕೆ ಶಿವಕುಮಾರ್, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಪ್ರಮುಖ ಸ್ಥಾನದಲ್ಲಿದ್ದಾರೆ..  ಇದೀಗ ಲಿಂಗಾಯತ ಸಮುದಾಯಕ್ಕೆ ಪ್ರಚಾರ ಸಮಿತಿ ಅಧ್ಯಕ್ಷ ಎನ್ನುವ ಮಹತ್ವದ ಜವಾಬ್ದಾರಿ ಹಂಚಿಕೆ ಮಾಡಿದೆ.

ಇನ್ನು ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನ ಅರಿತ ಕಾಂಗ್ರೆಸ್ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಹಾಗೇ ಅದು ಲಿಂಗಾಯತ ನಾಯಕ ಎನಿಸಿಕೊಂಡಿರು ಎಂಬಿ ಪಾಟೀಲ್‌ಗೆ ಪ್ರಚಾರ ಸಮಿತಿ ಅಧ್ಯಕ್ಷ ಮಾಡಲಾಗಿದೆ.

ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಲಿಂಗಾಯತ ನಾಯಕತ್ವಕ್ಕಾಗಿ  ರಾಜಕೀಯ ನಾಯಕರ ಮಧ್ಯೆ ಪೈಪೋಟಿ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಪಡೆಯಬೇಕಾದರೆ ಲಿಂಗಾಯತ ಮತಗಳೇ ನಿರ್ಣಾಯಕ. ಹಾಗಾಗಿ ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವದ ಕೊರತೆಯ ಲಾಭವನ್ನ ಬಳಸಿಕೊಳ್ಳಲು ಎಂಬಿಪಿಗೆ ಮಣೆ ಹಾಕಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ

ಯಡಿಯೂರಪ್ಪನವರ ಬಳಿಕ ಎಂಬಿ ಪಾಟೀಲ್ ಅವರು  ಲಿಂಗಾಯತ ನಾಯಕತ್ವವನ್ನ ತಮ್ಮ ಕಡೆ ಒಲಿಸಿಕೊಳ್ತಾರಾ ಎನ್ನುವುದು ಕಾದುನೋಡೇಕಿದೆ.

ಸಿದ್ದು ಮೇಲುಗೈ
ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ಸಿಕ್ಕಿದ್ದು, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ  ಬಣ ಮೇಲುಗೈ ಸಾಧಿಸಿದೆ

ಹೌದು... ಪ್ರಚಾರ ಸಮಿತಿ ಅಧ್ಯಕ್ಷಗಿರಿಗೆ ಹಲವು ಹಿರಿಯ ನಾಯಕರು ಕಣ್ಣಿಟ್ಟಿದ್ದರು. ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ, ದೇಶಪಾಂಡೆ ಸೇರಿದಂತೆ ಇತರೆ ನಾಯಕರು  ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ಮೇಲೆ ಆಸೆ ಇಟ್ಟುಕೊಂಡಿದ್ದು, ಆದ್ರೆ,  ಅವರಿಗೆ ನಿರಾಸೆಯಾಗಿದೆ.

ಹೈಕಮಾಂಡ್ ಮೇಲೆ ಒತ್ತಡ ಹಾಕಿ ತಮ್ಮ ಆಪ್ತವಯಲದಲ್ಲರುವ ಎಂಬಿ ಪಾಟೀಲ್‌ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ಕೊಡಿಸುವುಲ್ಲಿ ಸಿದ್ಧರಾಮಯ್ಯ ಯಶಸ್ವಿಯಾಗಿದ್ದಾರೆ.

ಭಾನುವಾರ ಸಂಜೆ ಬಾದಾಮಿಗೆ ತೆರಳುವ ಮುನ್ನ ಕಾರ್ಯಾಚರಣೆ ನಡೆಸಿದ್ದ ಸಿದ್ಧರಾಮಯ್ಯ,. ಕೂಡಲೇ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕವಾಗಲಿ ಎಂದು ಒತ್ತಾಯಿಸಿದ್ದರು. ತಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದ ಎಂ.ಬಿ.ಪಾಟೀಲ್ ಅವರನ್ನ ನೇಮಿಸುವಂತೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮೇಲೆ ಒತ್ತಡ ಹೇರಿದ್ದರು. ಅದರಂತೆ ಇದೀಗ ಅಧ್ಯಕ್ಷ ಹುದ್ದೆ ಎಂಬಿ ಪಾಟೀಲ್‌ಗೆ ಒಲಿದಿದ್ದು,  ಡಿಕೆ ಶಿವಕುಮಾರ್ ಬಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

..ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಿದ್ಧರಾಮಯ್ಯ ಮತ್ತು ಎಂ. ಬಿ.ಪಾಟೀಲ್ ಮಧ್ಯಪ್ರವೇಶ ನಿಶ್ಚಿತ. ಈ ಹಿನ್ನೆಲೆಯಲ್ಲಿ  ಚುನಾವಣಾ ವರ್ಷವಾಗಿರುವುದರಿಂದ ಎಂ.ಬಿ.ಪಾಟೀಲ್ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
 

click me!