
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ನಂಬಿದ್ದ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶವುಳ್ಳ ‘ಗೌರಿ ಸ್ಮಾರಕ ಟ್ರಸ್ಟ್’ ರಚನೆಯಾಗಿದೆ. ಈ ಟ್ರಸ್ಟ್ ಡಿ. 4ರಂದು ನೋಂದಣಿಯಾಗುವ ಮೂಲಕ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರಿ ಸ್ಮಾರಕ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ವಿ.ಎಸ್. ಶ್ರೀಧರ್ ಅವರು ಗೌರಿ ನಂಬಿದ್ದ ಮೌಲ್ಯ ಎತ್ತಿ ಹಿಡಿಯುವ ಪತ್ರಿಕೆಯನ್ನು ಹೊರತರಲು ನೆರವಾಗುವುದು ಸೇರಿ 4 ಮುಖ್ಯ ಉದ್ದೇಶಗಳನ್ನು ಇಟ್ಟುಕೊಂಡು ಈ ಟ್ರಸ್ಟ್ ಆರಂಭಿಸಲಾಗುತ್ತಿದೆ.
ಈ ಟ್ರಸ್ಟ್‌ಗೆ ಎಚ್.ಎಸ್.ದೊರೆಸ್ವಾಮಿ, ತೀಸ್ತಾ ಸೆಟಲ್‌ವಾಡ್ ಹಾಗೂ ಇತರರು ಮಾರ್ಗದರ್ಶಕರಾಗಿದ್ದಾರೆ. ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಮ್ ಪುತ್ತಿಗೆ, ಕೆ.ಎಲ್. ಅಶೋಕ್, ಎನ್.ಮುನಿಸ್ವಾಮಿ, ಹಾರ್ದಿಕ್ ದೇಸಾಯಿ, ಗಣೇಶ್ ದೇವಿ, ಡಾ.ರಹಮತ್ ತರೀಕೆರೆ, ಕೆ.ನೀಲಾ, ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವರು ಟ್ರಸ್ಟಿಗಳು ಎಂದು ಮಾಹಿತಿ ನೀಡಿದರು. ಗೌರಿ ಸ್ಮಾರಕ ಟ್ರಸ್ಟ್ ಸೋಮವಾರ
(ಡಿ. 4)ರಂದು ನೋಂದಣಿಯಾಗಲಿದೆ ಮತ್ತು ಟ್ರಸ್ಟ್‌ನ ಅಧಿಕೃತ ಘೋಷಣೆಯನ್ನು ಸೋಮವಾರ ಸಂಜೆ 5ಕ್ಕೆ ನಗರದ ಸೆನೆಟ್ ಹಾಲ್‌ನಲ್ಲಿ ‘ಸತ್ಯ ನುಡಿಯುವ ಅನಿವಾರ್ಯತೆ’ ವಿಚಾರಗೋಷ್ಠಿ ಹಾಗೂ ಉದ್ಘಾಟನಾ ಸಮಾರಂಭದ ಮೂಲಕ ಮಾಡಲಾಗುವುದು.
ತೀಸ್ತಾ ಸೆಟಲ್ವಾಡ್, ದೇವನೂರು ಮಹಾದೇವ, ಡಾ. ವಿಜಯಮ್ಮ, ಗಣೇಶ್ ಎನ್.ದೇವಿ, ಕೆ. ನೀಲಾ, ಪ್ರಕಾಶ್ ರೈ, ಸಿದ್ದಾರ್ಥ ವರದರಾಜನ್ ಭಾಗವಹಿಸುವರು.
ಟ್ರಸ್ಟ್‌ನ ಉದ್ದೇಶಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.