ಗೌರಿ ಲಂಕೇಶ್ ಅಂತ್ಯಸಂಸ್ಕಾರ; ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿಲ್ಲ

By Suvarna Web DeskFirst Published Sep 6, 2017, 5:58 PM IST
Highlights

ಸರಕಾರಿ ಗೌರವ ರೀತಿ ಅಂತ್ಯಸಂಸ್ಕಾರ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಿ.ಪರಮೇಶ್ವರ್, ಹ್ಯಾರಿಸ್, ಎಚ್.ಎಂ.ರೇವಣ್ಣ, ಕಾಂಗ್ರೆಸ್'ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೊದಲಾದ ನಾಯಕರು ಗೌರಿ ಲಂಕೇಶ್'ಗೆ ಅಂತಿಮ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಚಂದ್ರಶೇಖರ್ ಕಂಬಾರ್, ಅಗ್ನಿಶ್ರೀಧರ್, ದೊರೆಸ್ವಾಮಿ ಅಯ್ಯಂಗಾರ್ ಮೊದಲಾದವರು ಗೌರಿ ಲಂಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದರು.

ಬೆಂಗಳೂರು(ಸೆ. 06): ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಅವರ ಅಂತ್ಯ ಸಂಸ್ಕಾರ ನಡೆಯಿತು. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಇಂದು ಅವರು ಪಂಚಭೂತಗಳಲ್ಲಿ ಲೀನರಾದರು. ಅವರು ವೀರಶೈವ ಲಿಂಗಾಯತರಾಗಿದ್ದರೂ ಅವರನ್ನು ಆ ಜಾತಿಯ ಸಂಪ್ರದಾಯದ ವಿಧಿವಿಧಾನಗಳಂತೆ ಅಂತ್ಯ ಸಂಸ್ಕಾರ ಮಾಡಲಾಗಲಿಲ್ಲ. ಜೀವನದಾದ್ಯಂತ ಮೌಢ್ಯತೆಯ ವಿರುದ್ಧ ಹೋರಾಟ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಕುಟುಂಬಸ್ಥರು ಅಂತ್ಯ ಸಂಸ್ಕಾರದಲ್ಲೂ ಮೌಢ್ಯತೆಯನ್ನು ಧಿಕ್ಕರಿಸಲು ನಿರ್ಧರಿಸಿದರೆನ್ನಲಾಗಿದೆ. ಗೌರಿ ಲಂಕೇಶ್ ಅವರ ಪಾರ್ಥಿವ ಶರೀರದ ಮೇಲೆ ಹೂವುಗಳನ್ನು ಇರಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಅದು ಬಿಟ್ಟರೆ ಬೇರೆ ಧಾರ್ಮಿಕ ಆಚರಣೆಗಳು ಇದರಲ್ಲಿರಲಿಲ್ಲ.

ಇದೇ ವೇಳೆ, ಸರಕಾರಿ ಗೌರವ ರೀತಿ ಅಂತ್ಯಸಂಸ್ಕಾರ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಿ.ಪರಮೇಶ್ವರ್, ಹ್ಯಾರಿಸ್, ಎಚ್.ಎಂ.ರೇವಣ್ಣ, ಕಾಂಗ್ರೆಸ್'ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೊದಲಾದ ನಾಯಕರು ಗೌರಿ ಲಂಕೇಶ್'ಗೆ ಅಂತಿಮ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಚಂದ್ರಶೇಖರ್ ಕಂಬಾರ್, ಅಗ್ನಿಶ್ರೀಧರ್, ದೊರೆಸ್ವಾಮಿ ಅಯ್ಯಂಗಾರ್ ಮೊದಲಾದವರು ಗೌರಿ ಲಂಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದರು.

Latest Videos

click me!