ಬಿಜೆಪಿಯಿಂದ ಈ ನಾಯಕಗೆ ಗೇಟ್ ಪಾಸ್?

Published : Sep 20, 2018, 11:00 AM IST
ಬಿಜೆಪಿಯಿಂದ ಈ ನಾಯಕಗೆ ಗೇಟ್ ಪಾಸ್?

ಸಾರಾಂಶ

ಸದಾ ವಾಗ್ದಾಳಿ ನಡೆಸುತ್ತಾ ವಿಪಕ್ಷಗಳ ಕಾರ್ಯಕ್ರಮಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಈ ನಾಯಕಗೆ ಬಿಜೆಪಿಯಿಂದ ಕೋಕ್  ನೀಡುವ ಸಾಧ್ಯತೆಗಳಿದೆ.

ಪಟನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಸದಾ ಕಿಡಿಕಾರುವ ಮತ್ತು ಬಿಜೆಪಿ ಸಭೆಗಿಂತ ವಿಪಕ್ಷಗಳ ಕಾರ್ಯಕ್ರಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ತನ್ನ ಸಂಸದ ಶತ್ರುಘ್ನ ಸಿನ್ಹಾಗೆ ಕೊನೆಗೂ ಬಿಜೆಪಿ ಕೊಕ್‌ ನೀಡುವ ಸಾಧ್ಯತೆ.

ಲೋಕಸಭೆಯಲ್ಲಿ ಬಿಹಾರದ ಪಾಟ್ನಾ ಸಾಹೀಬ್‌ ಕ್ಷೇತ್ರವನ್ನು ಇದುವರೆಗೆ ಸಿನ್ಹಾ ಪ್ರತಿನಿಧಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರವನ್ನು , ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‌ ಮೋದಿಗೆ ಬಿಟ್ಟುಕೊಡಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. 

ಸಿನ್ಹಾ ಪಕ್ಷದ ವಿರುದ್ಧ ಹಲವು ಟೀಕೆ ಮಾಡಿದರೂ, ಅವರ ಬಗ್ಗೆ ಪಕ್ಷ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು