ವೆಬ್ ನಲ್ಲಿಯೂ ಇನ್ನು ಪ್ರಾಣೇಶ್ ಹಾಸ್ಯ

Published : Sep 05, 2018, 09:16 AM ISTUpdated : Sep 09, 2018, 09:37 PM IST
ವೆಬ್ ನಲ್ಲಿಯೂ ಇನ್ನು ಪ್ರಾಣೇಶ್ ಹಾಸ್ಯ

ಸಾರಾಂಶ

ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಅವರು ಇದೀಗ ತಮ್ಮ ಹಾಸ್ಯ ಜಗತ್ತನ್ನು ಇನ್ನಷ್ಟು ವಿಸ್ತರಣೆ ಮಾಡಿದ್ದಾರೆ. ಇನ್ನು ಮುಂದೆ ಅವರ ಹಾಸ್ಯಗಳನ್ನು ವೆಬ್ ಸೈಟ್ ಮೂಲಕ ನೋಡಬಹುದಾಗಿದೆ. ಇದಕ್ಕಾಗಿ ಅವರು ವೆಬ್ ಸೈಟ್ ಒಂದನ್ನು ಆರಂಭ ಮಾಡಿದ್ದಾರೆ. 

ಬೆಂಗಳೂರು: ನಾಡಿನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಇನ್ನು ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗುವ ಸಲುವಾಗಿ ‘ಈ ಹೆಜ್ಜೆ’ ಎಂಬ ಅಂತರ್ಜಾಲ ವೆಬ್ ಸೈಟ್ ಆರಂಭಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಬದುಕಿನ ಇನ್ನಷ್ಟು ಮಗ್ಗಲುಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಅಂತರ್ಜಾಲ ತಾಣ ಆರಂಭಿಸುತ್ತಿದ್ದೇನೆ.

ಕೇವಲ ಪುಸ್ತಕ ಓದುವ ಹವ್ಯಾಸದಲ್ಲಿಯೇ ತೊಡಗಿದ್ದ ನಾನು ಅಂತರ್ಜಾಲ ಬಳಕೆಯಲ್ಲಿ ಒಂದಿಷ್ಟು ಹಿಂದುಳಿದಿದ್ದೆ. ಆದರೆ, ಜನರಿಗೆ ಹತ್ತಿರವಾಗಲು ಈ ವೆಬ್‌ಸೈಟ್ ಪ್ರಾರಂಭಿಸಿದ್ದೇನೆ ಎಂದರು. ಈ ವೈಬ್‌ಸೈಟ್‌ನಲ್ಲಿ ನನ್ನ ಬದುಕಿನ ಸಿಹಿ ಕಹಿ ಅನುಭವಗಳು, ನಾನು ಪ್ರಸಿದ್ಧಿಯಾಗುವುದಕ್ಕೂ ಮುಂಚಿನ ಹಾಸ್ಯ ಕಾರ್ಯಕ್ರಮಗಳು ಲಭ್ಯವಿರಲಿವೆ. ಈವರೆಗೂ ನಾನು ನಡೆಸಿಕೊಟ್ಟು ಬಹುತೇಕ ರ್ಯಕ್ರಮಗಳನ್ನು ಪೋಸ್ಟ್ ಮಾಡಲಾಗುವುದು. ಜತೆಗೆ ಒಂದು ತಿಂಗಳ ಮುಂಚಿತವಾಗಿಯೇ ತಾವು ಭಾಗವಹಿಸುವ ಕಾರ್ಯಕ್ರಮಗಳ ಸ್ಥಳ ಹಾಗೂ ದಿನಾಂಕಗಳ ಪಟ್ಟಿ, ಲಭ್ಯತೆ ಕುರಿತ ಮಾಹಿತಿ ಸಿಗಲಿದೆ ಎಂದರು. 

ಈಗಾಗಲೇ ತಮ್ಮ ಕಾರ್ಯಕ್ರಮಗಳ ವಿಡಿಯೋಗಳನ್ನು ಅನೇಕರು ಯುಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ವೈಯಕ್ತಿಕವಾಗಿ ಹಣ ಮಾಡಿ ಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಈ ನಡೆಗೆ ಮುಂದಾಗಿದ್ದೇನೆ ಎಂದರು. ಹೆಚ್ಚಿನ ಮಾಹಿತಿಗೆ ಅಂತರ್ಜಾಲ ವಿಳಾಸ . www.gangavatipranesh.com  ಸಂಪರ್ಕಿಸಲು ಕೋರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ