ಗಂಗೆ ನೀರು ಕುಡಿಯಲಷ್ಟೇ ಅಲ್ಲ, ಸ್ನಾನಕ್ಕೂ ಯೋಗ್ಯವಿಲ್ಲ: ಸಿಪಿಸಿಬಿ ಎಚ್ಚರಿಕೆ!

By Web DeskFirst Published May 31, 2019, 10:03 AM IST
Highlights

ಗಂಗೆ ನೀರು ಕುಡಿಯಲಷ್ಟೇ ಅಲ್ಲ; ಸ್ನಾನಕ್ಕೂ ಯೋಗ್ಯವಲ್ಲ: ಸಿಪಿಸಿಬಿ| 7 ಕಡೆಗಳಲ್ಲಿ ಮಾತ್ರ ಗಂಗಾ ನದಿ ಕುಡಿಯಲು ಯೋಗ್ಯ| ಗಂಗಾ ನದಿಯ 18 ಕಡೆಗಳಲ್ಲಿ ಸ್ನಾನ ಮಾಡಬಹುದು| ಉಳಿದೆಡೆ ಸ್ನಾನ, ಕುಡಿಯಲು ಸಹ ಗಂಗೆ ಯೋಗ್ಯವಲ್ಲ

ನವದೆಹಲಿ[ಮೇ.: ಉತ್ತರಾಖಂಡ್‌ನ ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿಉತ್ತರ ಭಾರತದಾದ್ಯಂತ ಹರಿಯುವ ಗಂಗಾ ನದಿಯಲ್ಲಿ ಹಲವು ಔಷಧೀಯ ಗುಣಗಳಿದ್ದು, ಇದರಲ್ಲಿ ಸ್ನಾನ ಮಾಡಿದ್ರೆ, ಪುಣ್ಯ ಬರುತ್ತೆ ಎಂಬ ಪ್ರತೀತಿ ಇದೆ. ಆದರೆ, ಕೈಗಾರಿಕೋದ್ಯಮದ ಮಾಲಿನ್ಯ ನೀರು ಸೇರ್ಪಡೆ ಮತ್ತು ಇತರ ಕಾರಣಗಳಿಂದ ಮಾಲಿನ್ಯವಾದ ಗಂಗಾ ನದಿಯ ನೀರು ಕುಡಿಯಲು ಬಿಡಿ ಸ್ನಾನಕ್ಕೂ ಯೋಗ್ಯವಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಎಚ್ಚರಿಕೆ ನೀಡಿದೆ.

ಗಂಗಾ ನದಿ ಹರಿಯುವ 86 ಕಡೆಗಳಲ್ಲಿ ನೀರಿನ ಗುಣಮಟ್ಟದ ಮೇಲೆ ಕ್ಷಣ-ಕ್ಷಣಕ್ಕೂ ನಿಗಾ ಇಡುವ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರ ಅಧ್ಯಯನದ ವರದಿ ಪ್ರಕಾರ 7 ಕಡೆಗಳಲ್ಲಿ ಮಾತ್ರವೇ ಈ ನೀರು ಕುಡಿಯಲು ಯೋಗ್ಯವಾಗಿದೆ. ಉಳಿದ 78 ಕೇಂದ್ರಗಳಲ್ಲಿ ಗಂಗಾ ನದಿ ನೀರು ಕುಡಿಯಲು ಯೋಗ್ಯವಲ್ಲ. ಜೊತೆಗೆ 18 ಕಡೆಗಳಲ್ಲಿ ಸ್ನಾನ ಮಾಡಲು ಮಾತ್ರವೇ ಈ ನೀರು ಯೋಗ್ಯವಾಗಿದೆ. ಅಲ್ಲದೆ, ಉತ್ತರ ಪ್ರದೇಶ-ಪಶ್ಚಿಮ ಬಂಗಾಳದಲ್ಲಿ ಈ ನದಿ ನೀರು ಕುಡಿಯಲು ಹಾಗೂ ಸ್ನಾನ ಮಾಡಲು ಸಹ ಯೋಗ್ಯವಲ್ಲ ಎಂದು ಸಿಪಿಸಿಬಿ ಪ್ರತಿಪಾದಿಸಿದೆ.

ಈ ಹಿಂದೆ ಹಲವು ಕೈಗಾರಿಕೆಗಳು ಮಾಲಿನ್ಯಕಾರಕ ಅಂಶಗಳನ್ನು ನೇರವಾಗಿ ಗಂಗಾ ನದಿಗೆ ಹರಿಯಬಿಡುತ್ತಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗಂಗಾ ಶುಚಿತ್ವಕ್ಕಾಗಿ ಮಹತ್ವಾಕಾಂಕ್ಷಿ ನಮಾಮಿ ಗಂಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದಾದ ನಂತರ ಯಾವುದೇ ಕೈಗಾರಿಕೆಗಳು ತಮ್ಮ ತ್ಯಾಜ್ಯವನ್ನು ನದಿಗೆ ಹರಿಯಬಿಡುತ್ತಿಲ್ಲ. ಆದಾಗ್ಯೂ, ಗಂಗಾ ಶುಚಿತ್ವ ಪರಿಸ್ಥಿತಿ ತೃಪ್ತಿಕರವಾಗಿಲ್ಲ ಎಂದು ಕೇಂದ್ರ ಪರಿಸರ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಹೇಳಿದ್ದಾರೆ.

click me!