'ಗಾಂಧಿ' ಅನ್ನೋ ಸರ್ ನೇಮ್ ನನಗೆ ಹೊರೆಯಾಗುತ್ತಿದೆ: ವರುಣ್ ಗಾಂಧಿ

By Suvarna Web DeskFirst Published Nov 13, 2017, 9:37 PM IST
Highlights

ನನ್ನ ಹೆಸರಿನಲ್ಲಿ 'ಗಾಂಧಿ' ಇಲ್ಲದಿದ್ದರೆ ಸಂಸದನಾಗಿ ಆಯ್ಕೆಯಾಗುತ್ತಿರಲಿಲ್ಲ. 'ಗಾಂಧಿ' ಅನ್ನೋ ಸರ್ ನೇಮ್ ನನಗೆ ಹೊರೆಯಾಗುತ್ತಿದೆ ಎಂದು ಮಣಿಪಾಲದಲ್ಲಿ ಉಪನ್ಯಾಸ ನೀಡುವ ವೇಳೆ ವರುಣ್ ಗಾಂಧಿ ಹೇಳಿದ್ದಾರೆ.

ಉಡುಪಿ (ನ.13):  ನನ್ನ ಹೆಸರಿನಲ್ಲಿ 'ಗಾಂಧಿ' ಇಲ್ಲದಿದ್ದರೆ ಸಂಸದನಾಗಿ ಆಯ್ಕೆಯಾಗುತ್ತಿರಲಿಲ್ಲ. 'ಗಾಂಧಿ' ಅನ್ನೋ ಸರ್ ನೇಮ್ ನನಗೆ ಹೊರೆಯಾಗುತ್ತಿದೆ ಎಂದು ಮಣಿಪಾಲ್ ಯೂನಿವರ್ಸಿಟಿಯಲ್ಲಿ ನೀಡ್ ಫಾರ್ ಪೊಲಿಟಿಕಲ್ ರಿಫಾರ್ಮ್ ಎನ್ನುವ ವಿಚಾರದ ಮೇಲೆ ಉಪನ್ಯಾಸ ನೀಡುವ ವೇಳೆ ವರುಣ್ ಗಾಂಧಿ ಹೇಳಿದ್ದಾರೆ.

ಭಾರತದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ. 'ಫೇಮಸ್ 'ತಂದೆ ಇಲ್ಲದಿದ್ದರೆ ಮಗ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಈ ಅಸಮಾನತೆಯ ಲಾಭ ಪಡೆದವರಲ್ಲಿ ನಾನು ಒಬ್ಬ ಎಂದು ಜಾತ್ಯಾತೀತ ನಿಲುವಿನ ಬಗ್ಗೆ ವರುಣ್ ಗಾಂಧಿ ಒಲವು ತೋರಿದ್ದಾರೆ. 

ಸಂಸತ್ ಟೆಂಪಲ್ ಆಫ್ ಡಿಬೇಟ್ ಆಗಿ ಉಳಿದಿಲ್ಲ.  7 ವರ್ಷದಲ್ಲಿ 5 ಬಾರಿ ಸಂಸದರ ಸಂಬಳ ಏರಿಕೆಯಾಗಿದೆ. ಕಲಾಪ,ಮಸೂದೆ,ಹಾಜರಾತಿ ಬಗ್ಗೆ ಸಂಸದರಿಗೆ ಆಸಕ್ತಿಯಿಲ್ಲ ಎಂದು ಭಾರತದ ಸಂಸದೀಯ ವ್ಯವಸ್ಥೆ ಬಗ್ಗೆ  ವರುಣ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.

 

click me!