
ಬೆಂಗಳೂರು (ಮಾ. 23): ಫೇಸ್‌ಬುಕ್ ದತ್ತಾಂಶ ಸೋರಿಕೆ ವಿವಾದದಲ್ಲಿ ಕಾಂಗ್ರೆಸ್ ಹೆಸರನ್ನು ಬಿಜೆಪಿ ಎಳೆದು ತಂದಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ‘ಇರಾಕಲ್ಲಿ 39 ಭಾರತೀಯರು ಮೃತಪಟ್ಟ ಪ್ರಕರಣದಲ್ಲಿ ಅವರ ಕುಟುಂಬಗಳಿಗೆ ಸುಳ್ಳು ಹೇಳಿ ಕೇಂದ್ರ ಸಿಕ್ಕಿಬಿದ್ದಿದೆ. ಈಗ ಅದನ್ನು ಮುಚ್ಚಿಹಾಕಲು ಕಾಂಗ್ರೆಸ್, ಫೇಸ್ಬುಕ್‌ನ ಮಾಹಿತಿ ಕಳವಿನ ಕತೆ ಕಟ್ಟಿದೆ’ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಜಿಎಸ್‌ಟಿ ಕುರಿತಾದ ‘ಗಬ್ಬರ್ ಸಿಂಗ್ ಟ್ಯಾಕ್ಸ್’, ‘ವಿಕಾಸ್ ಗಾನ್ ಕ್ರೇಜಿ’ ಮುಂತಾದ ‘ವೈರಲ್’ ನುಡಿಗಟ್ಟುಗಳನ್ನು ರಾಹುಲ್‌ಗೆ ಹೆಣೆದುಕೊಟ್ಟಿದ್ದೇ ಈ ಕಂಪನಿ ಎಂದೂ ಅವರು ಹೇಳಿದ್ದಾರೆ. ರಾಹುಲ್ ಗಾಂಧಿಯ ಸಂಪೂರ್ಣ ಸಾಮಾಜಿಕ ಜಾಲತಾಣ ಪ್ರಚಾರ ಕಾರ್ಯವನ್ನು ಕೇಂಬ್ರಿಜ್ ಅನಾಲಿಟಿಕಾ ಕಂಪನಿಯ ನೆರವಿನಿಂದಲೇ ನಿರ್ವಹಿಸಲಾಗುತ್ತಿದೆ. ಇವರು ಸಭೆಗಳನ್ನು ಕೂಡ ನಡೆಸಿದ್ದಾರೆ. ಈ ಕಂಪನಿ ತೀಕ್ಷ್ಣವಾದ, ಕೆಳಮಟ್ಟದ ಹಾಗೂ ಸುಳ್ಳು ಸುದ್ದಿಗಳ ಪ್ರಚಾರಕ್ಕೆ ಹೆಸರುವಾಸಿ. ಗಬ್ಬರ ಸಿಂಗ್ ಟ್ಯಾಕ್ಸ್ ಎಂಬ ಹೇಳಿಕೆಯನ್ನು ಹೇಳಿಕೊಟ್ಟಿದ್ದು ಕೂಡ ಇದೇ ಕಂಪನಿ. ಆದರೆ ಈ ಮಾಹಿತಿ ಬಹಿರಂಗ ಮಾಡದೇ ೫ ತಿಂಗಳಿಂದ ರಾಹುಲ್ ಏಕೆ ಸುಮ್ಮನೇ ಕೂತಿದ್ದಾರೆ ಎಂದು ರವಿಶಂಕರ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.