ಬಂಗಾಳದಲ್ಲಿ ಮತ್ತೆ ಹಿಂಸೆ: ನಾಡಬಾಂಬ್‌ ತೂರಾಟ!

By Web Desk  |  First Published Jun 23, 2019, 9:13 AM IST

ಬಂಗಾಳದಲ್ಲಿ ಮತ್ತೆ ಹಿಂಸೆ: ನಾಡಬಾಂಬ್‌ ತೂರಾಟ!| ಬಿಜೆಪಿ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ


ಕೋಲ್ಕತಾ[ಜೂ.23]: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಶುರುವಾದ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಘರ್ಷಣೆ ಮತ್ತೆ ಮುಂದುವರಿದಿದೆ.

ಕೋಲ್ಕತಾದಿಂದ 30 ಕಿ.ಮೀ. ದೂರದಲ್ಲಿರುವ ಭಾಟ್‌ಪಾರಾದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಶನಿವಾರ ಎರಡೂ ಪಕ್ಷಗಳ ಕಾರ್ಯಕರ್ತರು ನಾಡಬಾಂಬ್‌, ಕಲ್ಲುಗಳನ್ನು ತೂರಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

Tap to resize

Latest Videos

ಗುರುವಾರ ಭಾಟ್‌ಪಾರಾದಲ್ಲಿ ಸಂಭವಿಸಿದ್ದ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಹತರಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚನೆ ಮೇರೆಗೆ ವಸ್ತು ಸ್ಥಿತಿ ಅಧ್ಯಯನ ನಡೆಸಲು ಸಂಸದ ಅಹ್ಲುವಾಲಿಯಾ ನೇತೃತ್ವದ ತ್ರಿಸದಸ್ಯ ತಂಡ ಭಾಟ್‌ಪಾರಾಕ್ಕೆ ಆಗಮಿಸಿತ್ತು. ಈ ತಂಡ ಪರಿಶೀಲನೆ ಮುಗಿಸಿ ವಾಪಸ್‌ ತೆರಳುತ್ತಿದ್ದಂತೆ ಘರ್ಷಣೆ ಉಂಟಾಗಿದೆ.

click me!