ತಪ್ಪು ಮಾಡುವ ಹಕ್ಕನ್ನು ನೀಡಿದ ಫ್ರಾನ್ಸ್ ಸರ್ಕಾರ

By Suvarna Web DeskFirst Published Jan 25, 2018, 10:37 AM IST
Highlights

ಜನರು ತಪ್ಪು ಮಾಡುವುದು, ಕೆಲವೊಮ್ಮೆ ಶಿಕ್ಷೆ ಅನುಭವಿಸುವುದು ಸಹಜ. ಆದರೆ, ಫ್ರಾನ್ಸಲ್ಲಿ ಈ ಭಯ ದೂರ ಮಾಡುವ ಸಲುವಾಗಿ ಜನರಿಗೆ ‘ತಪ್ಪು ಮಾಡುವ ಹಕ್ಕು’ ನೀಡುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ.

ಪ್ಯಾರಿಸ್: ಜನರು ತಪ್ಪು ಮಾಡುವುದು, ಕೆಲವೊಮ್ಮೆ ಶಿಕ್ಷೆ ಅನುಭವಿಸುವುದು ಸಹಜ. ಆದರೆ, ಫ್ರಾನ್ಸಲ್ಲಿ ಈ ಭಯ ದೂರ ಮಾಡುವ ಸಲುವಾಗಿ ಜನರಿಗೆ ‘ತಪ್ಪು ಮಾಡುವ ಹಕ್ಕು’ ನೀಡುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಂಸದರು ಕೈ ಎತ್ತಿ ಬೆಂಬಲ ಸೂಚಿಸುವ ಮೂಲಕ ಮಸೂದೆ ಅನುಮೋದಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಚುನಾವಣಾ ಪ್ರಚಾರದ ವೇಳೆ, ಜನರಿಗೆ ಒಳ್ಳೆಯ ಉದ್ದೇಶಕ್ಕೆ ತಪ್ಪು ಮಾಡಲು ಅವಕಾಶ ನೀಡಲಾಗುವುದು. ಮೊದಲಬಾರಿಗೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಅದರಂತೆ ಈಗ ಕಾನೂನನ್ನು ಜಾರಿ ಮಾಡಲಾಗಿದೆ. ಆದರೆ, ತಪ್ಪು ಮಾಡಿದ ವ್ಯಕ್ತಿಯ ಉದ್ದೇಶ ಒಳ್ಳೆಯದೋ, ಕೆಟ್ಟದ್ದೋ ಎಂದು ಪತ್ತೆ ಮಾಡುವುದು ಅಧಿಕಾರಿಗಳ ಕೆಲಸವಂತೆ.

click me!