ಚೌಕಾಶಿ ಇಲ್ಲದೇ ಅಭಿ ಬಿಡುಗಡೆ: ಇಮ್ರಾನ್‌ ಹೊಗಳಿದ ದಿಗ್ವಿಜಯ್‌

Published : Mar 04, 2019, 10:13 AM IST
ಚೌಕಾಶಿ ಇಲ್ಲದೇ ಅಭಿ ಬಿಡುಗಡೆ: ಇಮ್ರಾನ್‌ ಹೊಗಳಿದ ದಿಗ್ವಿಜಯ್‌

ಸಾರಾಂಶ

ಅಭಿನಂದನ್ ಬಿಡುಗಡೆ ಮಾಡಿದ ಪಾಕಿಸ್ತಾನ| ಇಮ್ರಾನ್ ಖಾನ್ ಹೊಗಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

ಇಂದೋರ್‌[ಮಾ.04]: ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿ ಬಂದಿದ್ದಾರೆ. ಸದ್ಯ ಈ ವಿಚರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರನ್ನು ಹೊಗಳಿದ್ದಾರೆ.

ಪಾಕಿಸ್ತಾನದ ಸೇನೆ ಹಾಗೂ ಐಎಸ್‌ಐನ ವಿರೋಧದ ಹೊರತಾಗಿಯೂ ಯಾವುದೇ ಚೌಕಾಸಿ ಇಲ್ಲದೇ ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ರನ್ನು ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌ ಬಿಡುಗಡೆ ಮಾಡಿದ್ದನ್ನು ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಪ್ರಶಂಸಿಸಿದ್ದಾರೆ.

ಈ ಕುರಿತು ಸ್ಥಳೀಯ ಜನರೂ ಸಹ ವಿರೋಧ ವ್ಯಕ್ತಪಡಿಸಿದಾಗಲೂ ಅದನ್ನು ನೋಡದೇ ‘ಅಭಿ’ ಬಿಡುಗಡೆ ಮಾಡಿದ ಇಮ್ರಾನ್‌ಖಾನ್‌ಗೆ ‘ಧನ್ಯವಾದಗಳು’ನ್ನು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಮ್ಮ ಮನೇಲಿ ಯಾರೂ ಓದಿಲ್ಲ, ನೀನೂ ಓದೋದು ನಿಲ್ಲಿಸು : ಪಕ್ಕದ್ಮನೆ ಯುವತಿ ಮೇಲೆ ಹಲ್ಲೆ
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ : ಶೃಂಗೇರಿ ಕಾಂಗ್ರೆಸ್ ಶಾಸಕ ಟಿ ಡಿ‌‌ ರಾಜೇಗೌಡ ಕಣ್ಣೀರು