ಜಲ್ಲಿಕಟ್ಟು: ಗೂಳಿ ಇಲ್ಲದಿದ್ದರೇನಾಯ್ತು, ನರಿಗೆ ಅನುಮತಿ ಇದೆಯಲ್ಲ!

By Suvarna web DeskFirst Published Jan 19, 2017, 12:00 PM IST
Highlights

ಇಲ್ಲಿನ ಚಿನ್ನಮನೈಕನ್ ಪಾಲ್ಯಂ ಗ್ರಾಮಸ್ಥರಿಗೆ ನರಿ ಜಲ್ಲಿಕಟ್ಟು ನಡೆಸಲು ಅರಣ್ಯಾಧಿಕಾರಿಗಳು ಅನುಮತಿ ನೀಡಿದ್ದಾರೆ.

ಸೇಲಂ (ಜ.19): ಇಲ್ಲಿನ ಚಿನ್ನಮನೈಕನ್ ಪಾಲ್ಯಂ ಗ್ರಾಮಸ್ಥರಿಗೆ ನರಿ ಜಲ್ಲಿಕಟ್ಟು ನಡೆಸಲು ಅರಣ್ಯಾಧಿಕಾರಿಗಳು ಅನುಮತಿ ನೀಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನರಿ ಬಂದರೂ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿ ನಡೆಸಲು ಅನುಮತಿ ನೀಡಿದ್ದಾರೆ. ಸ್ಪರ್ಧೆಯಲ್ಲಿ ಬಾಗವಹಿಸುವವರಿಗೆ ಕಚ್ಚಬಾರದೆಂದು  ಮುಂಜಾಗ್ರತಾ ಕ್ರಮವಾಗಿ ನರಿ ಬಾಯಿಗೆ ಬಟ್ಟೆ ಕಟ್ಟಲಾಗಿತ್ತು.

ಪ್ರತಿ ವರ್ಷ ಕಾನೂಮ್ ಪೊಂಗಲ್ ದಿನ ಸೇಲಂ ಜಿಲ್ಲಯ ಕೆಲವು ಭಾಗಗಳಲ್ಲಿ ನರಿ ಜಲ್ಲಿಕಟ್ಟು ನಡೆಯುತ್ತದೆ.

ಇಂದು ಗ್ರಾಮಸ್ಥರು ನರಿಯನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡುತ್ತಾರೆ. ಹೂವಿನ ಹಾರವನ್ನು ಹಾಕಲಾಗುತ್ತದೆ. ನಂತರ ನರಿ ಕಾಲನ್ನು ಹಗ್ಗದಿಂದ ಕಟ್ಟಿ ಓಡಿಸಲಾಗುತ್ತದೆ. ಅದನ್ನು ಬೆನ್ನಟ್ಟಿ ಹಿಡಿದು ನಿಲ್ಲಿಸಬೇಕು. ಇದು ನರಿ ಜಲ್ಲಿಕಟ್ಟು ನಡೆಯುವ ರೀತಿ. ಗೂಳಿ ಜಲ್ಲಿಕಟ್ಟು ಮಾದರಿಯಲ್ಲೇ ನಡೆಯುತ್ತದೆ. ನಂತರ ನರಿಯನ್ನು ಕಾಡಿಗೆ ಮರಳಿ ಬಿಡಲಾಗುತ್ತದೆ.

click me!