ಕುಡಿದ ಮತ್ತಿನಲ್ಲಿ 35 ದಿನಗೂಲಿ ನೌಕರರ ಮೇಲೆ ಕಾರು ಚಲಾಯಿಸಿದ ಶಾಸಕ!

Published : Jan 08, 2017, 08:27 AM ISTUpdated : Apr 11, 2018, 12:39 PM IST
ಕುಡಿದ ಮತ್ತಿನಲ್ಲಿ 35 ದಿನಗೂಲಿ ನೌಕರರ ಮೇಲೆ ಕಾರು ಚಲಾಯಿಸಿದ ಶಾಸಕ!

ಸಾರಾಂಶ

ಉತ್ತರ ಪ್ರದೇಶದ ಲಕ್ನೋದಲ್ಲಿ ಕಾರೊಂದು ಗುಡಿಸಲಿಗೆ ನುಗ್ಗಿ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ಲಕ್ನೋದ ದಾಲಿಬಾಗ್‌ ಏರಿಯಾದಲ್ಲಿ ನಸುಕಿನ ಜಾವ 2 ಗಂಟೆಗೆ ಹುಂಡೈ ಐ-20 ಕಾರೊಂದು ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದೆ.

ಉತ್ತರಪ್ರದೇಶ(ಜ.08): ಉತ್ತರ ಪ್ರದೇಶದ ಲಕ್ನೋದಲ್ಲಿ ಕಾರೊಂದು ಗುಡಿಸಲಿಗೆ ನುಗ್ಗಿ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ಲಕ್ನೋದ ದಾಲಿಬಾಗ್‌ ಏರಿಯಾದಲ್ಲಿ ನಸುಕಿನ ಜಾವ 2 ಗಂಟೆಗೆ ಹುಂಡೈ ಐ-20 ಕಾರೊಂದು ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದೆ.

ಗುಡಿಸಲಿನಲ್ಲಿ ಸುಮಾರು 35 ದಿನಗೂಲಿ ನೌಕರರು ಮಲಗಿದ್ದರು. ನೌಕರರ ಮೇಲೆ ಕಾರು ಹರಿದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.

ಇವರೆಲ್ಲರು ಬಹರೈಚ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ಕೃತ್ಯವೆಸಗಿ ಕಾರಿನ ಸಮೇತ ಚಾಲಕ ಮತ್ತು ಸಹಚರರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇತರ ಕಾರ್ಮಿಕರು ಕಾರಿನ ಸಮೇತ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಇನ್ನು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತರಲ್ಲಿ ಓರ್ವ ಬ್ಯುಸಿನೆಸ್‌'ಮ್ಯಾನ್‌ ಮಗ ಹಾಗೂ ಸ್ಥಳೀಯ ಮಾಜಿ ಶಾಸಕ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾಗಿರುವ ಆರೋಪಿಗಳಿಗೆ ಶೋಧ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!