
ನವದೆಹಲಿ[ಮಾ.20]: ಪತ್ರಕರ್ತೆ ಬರ್ಖಾ ದತ್ ಗೆ ಸೋಶಿಯಲ್ ಮೀಡಿಯಾ ಹಾಗೂ ಮೆಸೇಜ್ ಮೂಲಕ ಕಿರುಕುಳ ಹಾಗೂ ಟ್ರೋಲ್ ಮಾಡಿರುವ ಆರೋಪದಡಿಯಲ್ಲಿ ದೆಹಲಿ ಸೈಬರ್ ಕ್ರೈಂ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇವರಲ್ಲಿ ಮುವರನ್ನು ದೆಹಲಿಯಲ್ಲಿ ಬಂಧಿಸಿದ್ದರೆ, ಒಬ್ಬಾತನನ್ನು ಗುಜರಾತ್ ನ ಸೂರತ್ ನಲ್ಲಿ ಬಂಧಿಸಲಾಗಿದೆ. ಫೆಬ್ರವರಿ 21 ರಂದು ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಬರ್ಖಾ ದತ್ ಕೆಲ ಅನಾಮಿಕರಿಂದ ತನಗೆ ಜೀವ ಬೆದರಿಕೆ ಕರೆಗಳು, ಮೆಸೇಜ್ ಗಳು ಸೇರಿದಂತೆ ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ದೂರು ನೀಡಿದ್ದರು.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಟೆಕ್ನಿಕಲ್ ಸರ್ವಿಲೆನ್ಸ್ ಬಳಸಿ ನಾಲ್ವರನ್ನು ಬಂಧಿಸಲಾಗಿದೆ. ದೆಲಿಯಿಂದ ರಾಜೀವ್ ಶರ್ಮಾ (23), ಹೇಮರಾಜ್ ಕುಮಾರ್ (31) ಆದಿತ್ಯ ಕುಮಾರ್ (34) ಹಾಗೂ ಗುಜರಾತ್ ನ ಸೂರತ್ ನಿಂದ ಶಬ್ಬೀರ್ ರ್ಫಾನ್ ಪಿಂಜರಿ (45) ರನ್ನು ಪೋಲೀಸರು ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ಆರಂಭಿಸಿದ್ದಾರೆ.
ಬಂಧಿತರಲ್ಲಿ ರಾಜೀವ್ ಶರ್ಮಾಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ನಡೆಸುತ್ತಿದ್ದರೆ, ಹೇಮರಾಜ್ ಕುಮಾರ್ ಖಾಸಗಿ ಹೊಟೇಲ್ ಒಂದರಲ್ಲಿ ಶೆಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆದಿತ್ಯ ಕುಮಾರ್ ಖಾಸಗಿ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. ವಿಚಾರಣೆ ಸಂದರ್ಭದಲ್ಲಿ ತಮಗೆ ಬರ್ಖಾ ದತ್ ಮೊಬೈಲ್ ಸಂಖ್ಯೆ ಸೋಶಿಯಲ್ ಮೀಡಿಯಾ ಮೂಲಕ ಲಭಿಸಿತ್ತು ಎಂದು ಬಾಯ್ಬಿಟ್ಟಿದ್ದಾರೆ. ಸದ್ಯ ಪೊಲೀಸರು ದತ್ ರವರ ಖಾಸಗಿ ಮೊಬೈಲ್ ಸಂಖ್ಯೆಯನ್ನು ಲೀಕ್ ಮಾಡಿರುವ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.
ಇದರಲ್ಲಿ ಮೊದಲ ಮೂವರು ಆರೋಪಿಗಳು ದೆಹಲಿಯವರಾದರೆ ಕಡೆಯ ಆರೋಪಿ ಶಬ್ಬೀರ್ ಮಾತ್ರ್ ಸೂರತ್ ಮೂಲದವನಾಗಿದ್ದ.ನೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಪುಲ್ವಾಮಾ ಭಯೋತ್ಪಾದನಾ ದಾಳಿ ನಂತರ ದೇಶಾದ್ಯಂತ ಜನರಿಂದ ಹಲ್ಲೆಗೊಳಗಾಗುತ್ತಿದ್ದ ಕಾಶ್ಮೀರಿ ಯುವಕರ ರಕ್ಷಣೆಗೆ ಸಂಬಂಧಿಸಿ ಬರ್ಖಾ ದತ್ ಟ್ವೀಟ್ ಮಾಡಿದ್ದರು. ಬಳಿಕ ಅವರಿಗೆ ಬೆದರಿಕೆ ಕರೆ, ಅಶ್ಲೀಲ ಸಂದೇಶಗಳು ಬರಲು ಪ್ರಾರಂಭವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.