ಸರ್ಕಾರ ಬದಲಾಗ್ತಿದ್ದಂತೆ ವಿಧಾನಸೌಧದ ಕಚೇರಿ ಖಾಲಿ ಮಾಡಿದ ಜಿಟಿಡಿ

By Web DeskFirst Published Jul 29, 2019, 9:31 PM IST
Highlights

ಸರ್ಕಾರ ಬದಲಾಗುತ್ತಲೇ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ.ದೇವೇಗೌಡ ಗಂಟು-ಮೂಟೆ ಕಟ್ಟಿದ್ದಾರೆ. ಮತ್ತೇನಿಲ್ಲ ವಿಧಾನಸೌಧದಲ್ಲಿ ತಮಗೆ ನೀಡಿದ್ದ ಕಚೇರಿ ಖಾಲಿ ಮಾಡಿದ್ದಾರೆ.

ಬೆಂಗಳೂರು[ಜು. 29]  ದೋಸ್ತಿ ಸರ್ಕಾರ ಬಿದ್ದು ಹೋಗಿ ಆ ಜಾಗದಲ್ಲಿ ಬಿಜೆಪಿ ಸರ್ಕಾರ ಪ್ರತಿಷ್ಠಾಪನೆಯಾಗಿದೆ. ಪರಿಣಾಮ ಸಚಿವರ ಸ್ಥಾನವೂ ಬದಲಾಗಿದ್ದು ಹಾಲಿ ಇದ್ದವರೆಲ್ಲ ಮಾಜಿ ಆಗಿದ್ದಾರೆ.

ಉನ್ನತ ಶಿಕ್ಷಣ ಸಚಿವರಾಗಿದ್ದ ಜಿಟಿ ದೇವೇಗೌಡ ವಿಧಾನಸೌಧದ ಕಚೇರಿ ಖಾಲಿ ಮಾಡಿದ್ದಾರೆ. ಕಚೇರಿಯಲ್ಲಿನ ಪೀಠೋಪಕರಣ ಹಾಗೂ ಗಣ್ಯರ ಭಾವಚಿತ್ರಗಳನ್ನು ಸಹ ಶಿಫ್ಟ್ ಮಾಡಿದ್ದಾರೆ.

ಸ್ಪೀಕರ್ ಅಭ್ಯರ್ಥಿ ಫೈನಲ್, ರಮೇಶ್ ಕುಮಾರ್ ಸ್ಥಾನಕ್ಕೆ ಈ ನಾಯಕ

ಸ್ವಂತ ಖರ್ಚಿನಲ್ಲಿ ಖರೀದಿ ಮಾಡಿದ್ದ ಪೀಠೋಪಕರಣಗಳು ಇದಾಗಿದ್ದು ಸರ್ಕಾರ ಬದಲಾವಣೆಯಾಗಿರುವುದರಿಂದ ತಮ್ಮ ನಿವಾಸಕ್ಕೆ ಪೀಠೋಪಕರಣಗಳನ್ನು ಜಿಟಿಡಿ ತೆಗೆದುಕೊಂಡು ಹೋಗಿದ್ದಾರೆ. 

click me!