ಮಾಜಿ ಸಿಎಂ ಧರಂ ಸಿಂಗ್ ಇನ್ನಿಲ್ಲ

By Suvarna Web Desk  |  First Published Jul 27, 2017, 11:58 AM IST

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಧರ್ಮಸಿಂಗ್ ವಿಧಿವಶರಾಗಿದ್ದಾರೆ. ತೀವ್ರ ಅಸ್ಪಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಎಂ. ಎಸ್ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.


ಬೆಂಗಳೂರು(ಜು.27): ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಧರ್ಮಸಿಂಗ್(80) ವಿಧಿವಶರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಬೆಂಗಳೂರಿನ ಎಂ. ಎಸ್ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

Latest Videos

undefined

ಜೇವರ್ಗಿ ತಾಲೂಕಿನ ನೇಲೋಗಿ ತಾಲೂಕಿನಲ್ಲಿ ಜನಿಸಿದ್ದ ದರಂ ಸಿಂಗ್ 1936ರ ಡಿಸೆಂಬರ್ 25 ರಂದು ಜನಿಸಿದ್ದ ಮಾಜಿ ಸಿಎಂ ಧರಂ ಸಿಂಗ್ 80ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

2004 ರಿಂದ 2006ರವರೆಗೆ ಕರ್ನಾಟಕದ ಸಿಎಂ ಆಗಿದ್ದ ಧರಂ ಸಿಂಗ್ ಕರ್ನಾಟಕದ 17ನೇ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ 1972ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಜೇವರ್ಗಿಯಿಂದ ಸತತ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ನಗರಾಭಿವೃದ್ಧಿ, ಗೃಹ, ಅಬಕಾರಿ, ಕಂದಾಯ ಸಚಿವರಾಗಿದ್ದರಲ್ಲದೆ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1999 ರಿಂದ 2004ರವರೆಗೆ ಲೋಕೋಪಯೋಗಿ ಸಚಿವರಾಗಿ ಸೇವೆಯನ್ನೂ ಸಲ್ಲಿಸಿದ್ದರು.

ರಾಜಕೀಯಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಧರಂಸಿಂಗ್ ಇಹಲೋಕ ತ್ಯಜಿಸಿದ್ದು, ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ನಾಳೆ ಕಲಬುರಗಿಯ ನೆಲೋಗಿಯಲ್ಲಿ ಧರಂಸಿಂಗ್​ ಅಂತ್ಯಸಂಸ್ಕಾರ ನಡೆಯಲಿದ್ದು, ಅವರ ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. 

click me!