ಜನಪರ ಯೋಜನೆಗಳನ್ನು ರದ್ದುಗೊಳಿಸದಂತೆ ಸಿಎಂ ಯಡಿಯೂರಪ್ಪರನ್ನು ಎಚ್ಚರಿಸಿದ್ದೇನೆ| '56 ಇಂಚಿನ ಮೋದಿಗೆ ಮಾತೃ ಹೃದಯ ಇಲ್ಲ ಕೈ ಅಧಿಕಾರಕ್ಕೆ ಬಂದ್ರೆ 10ಕೇಜಿ ಅಕ್ಕಿ: ಮಾಜಿ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು[ಅ.14]: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಯಂತಹ ಅನೇಕ ಜನಪ್ರಿಯ ಯೋಜನೆಗಳನ್ನು ಈಗಿನ ಯಡಿಯೂರಪ್ಪ ಸರ್ಕಾರ ರದ್ದುಪಡಿಸದಂತೆ ಎಚ್ಚರಿಸಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬಂದರೆ ಬಿಪಿಎಲ್ ಪಡಿತರದಾರ ಕುಟುಂಬದವರಿಗೆ ತಲಾ ೧೦ ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ದಾವಣಗೆರೆ ಮತ್ತು ಹರಿಹರದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ರದ್ದು ಪಡಿಸುವಂತಿಲ್ಲ. ಒಮ್ಮೆ ರದ್ದು ಪಡಿಸಿದರೆ ರಾಜ್ಯದಲ್ಲಿ ರಕ್ತ ಕ್ರಾಂತಿಯೇ ನಡೆಯಲಿದೆ ಎಂದು ಎಚ್ಚರಿಸಿದರು.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗೆ ಹಣ ನಿಲ್ಲಿಸಬೇಡಿ: ಸಿದ್ದರಾಮಯ್ಯ ಮನವಿ
ಕಡಿಮೆ ದರದಲ್ಲಿ ಬಹಳಷ್ಟು ಜನ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ ಒಳ್ಳೆಯ ಊಟ ದೊರೆಯಲಿ ಎನ್ನುವ ಕಾರಣಕ್ಕೆ ೨೦೧೭-೧೮ ರ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಪ್ರಾರಂಭಿಸಲಾಯಿತು. ಇದರ ಲಾಭ ಇಂದು ಸುಮಾರು ನಾಲ್ಕು ಕೋಟಿ ಜನರಿಗೆ ತಲುಪುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಳ್ಳುತ್ತಾರೆ. 56ಇರಲಿ, 100 ಇಂಚಿನ ಎದೆಯೇ ಇರಲಿ. ಅದರೊಳಗೆ ಮಾತೃ ಹೃದಯ ಇರಬೇಕು. ಅವರಿಗೆ ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಮಾತೃಹೃದಯ ಇಲ್ಲ ಎಂದು ಹೇಳಿದರು.
ಮಾಧ್ಯಮಗಳ ನಿರ್ಬಂಧ ಪ್ರಜಾಪ್ರಭುತ್ವಕ್ಕೆ ಮಾರಕ: ಸಿದ್ದು