
ನವದೆಹಲಿ[ಸೆ.18]: ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಯುವತಿಯರು ಮುಂದೆ ಮಾಡೆಲಿಂಗ್, ಆ್ಯಕ್ಟಿಂಗ್ ನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡುತ್ತಾರೆ ಎಂದು ಭಾವಿಸುವವರು ಲೆಫ್ಟಿನೆಂಟ್ ಗರಿಮಾ ಯಾದವ್ ಕುರಿತು ತಿಳಿಯಲೇಬೇಕು. ಈಕೆ ದೇಶ ಸೇವೆಗಾಗಿ ಫ್ಯಾಷನ್ ಲೋಕಕ್ಕೆ ಗುಡ್ ಬೈ ಎಂದ ಚೆಲುವೆ.
ಹೌದು ಗರಿಮಾ ಯಾದವ್ ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ ಕಾಲೇಜಿನ ಪದವೀಧರೆ. ಹರ್ಯಾಣದ ರೆವಾಡಿಯ ಸುರ್ಹೇಲೀ ಹಳ್ಳಿಯ ಗರಿಮಾ 'ಇಂಡಿಯಾಸ್ ಮಿಸ್ ಚಾರ್ಮಿಂಗ್ ಫೇಸ್-2017' ಅವಾರ್ಡ್ ತಮ್ಮದಾಗಿಸಿಕೊಂಡಿದ್ದರು. ಮುಂಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 20 ರಾಜ್ಯಗಳ ಸ್ಪರ್ಧಾಳಿಗಳನ್ನು ಹಿಂದಿಕ್ಕಿದ ಗರಿಮಾ ವಿನ್ನರ್ ಆಗಿ ಹೊರಹೊಮ್ಮಿದ್ದರು.
ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!
ಇಂಡಿಯಾಸ್ ಮಿಸ್ ಚಾರ್ಮಿಂಗ್ ಫೇಸ್ ವಿಜೇತೆಯಾದ ಬಳಿಕ ಅವರು ಮಾಡೆಲಿಂಗ್ ಹಾಗೂ ಆ್ಯಕ್ಟಿಂಗ್ ವೃತ್ತಿಯನ್ನು ಆರಸಿಕೊಳ್ಳಲಿಲ್ಲ, ಬದಲಾಗಿ ತಮ್ಮ ಕನಸಿನ ಬೆನ್ನತ್ತಿದರು. ಹೌದು ಭಾರತೀಯ ಸೇನೆಗೆ ಸೇರುವ ಇಚ್ಛೆ ಹೊಂದಿದ್ದ ಗರಿಮಾ ಮೊದಲ ಪ್ರಯತ್ನದಲ್ಲೇ ಭರ್ತಿಯಾಗಲು CDS ಪರೀಕ್ಷೆಯಲ್ಲಿ ಉತ್ತೀರ್ಣರಾದರು ಹಾಗೂ ಚೆನ್ನೈನ OTA[ಆಫೀಸರ್ ಟ್ರೈನಿಂಗ್ ಅಕಾಡೆಮಿ] ಸೇರುವಲ್ಲಿ ಯಶಸ್ವಿಯಾದರು.
ಇನ್ನು ಭಾರತೀಯ ಸೇನೆಯಲ್ಲಿ ಆಫೀಸರ್ ಆಗುವುದಕ್ಕೂ ಮೊದಲು ಇಟಲಿಯಲ್ಲಿ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಬಂದಿತ್ತು. ಆದರೆ ಗರಿಮಾ ಪ್ಯಾಷನ್ ಲೋಕಕ್ಕಿಂತ ಹೆಚ್ಚು ದೇಶ ಸೇವೆಗೆ ಮಹತ್ವ ನೀಡಿದರು.
ಸದ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗರಿಮಾ ಯಾದವ್ ಮಾತನಾಡುತ್ತಾ 'ಶಾರೀರಿಕ ದೃಢತೆ ಹೊಂದಿದ್ದರೆ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮವಾಗಿರುವವರಷ್ಟೇ SSBಗೆ ಸೇರ್ಪಡೆಯಾಗಬಹುದೆಂದು ಭಾವಿಸುತ್ತಾರೆ. ಆದರೆ ಇದು ತಪ್ಪು. ಇಲ್ಲಿ ನೀವು ನಿಮ್ಮ ದೌರ್ಬಲ್ಯಗಳನ್ನು ಪತ್ತೆಹಚ್ಚಿ ಕೆಲಸಡ ಮಾಡಬೇಕು. ಇದಾದ ಬಳಿಕ ನಿಮ್ಮ ಜೀವನ ಸುಗಮವಾಗುತ್ತದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.