ವಿಧಾನಸಭೆ ಮಾಜಿ ಸ್ಪೀಕರ್ ರಾವ್ ಆತ್ಮಹತ್ಯೆ!

By Web DeskFirst Published Sep 16, 2019, 1:56 PM IST
Highlights

ವಿಧಾನಸಭೆ ಮಾಜಿ ಸ್ಪೀಕರ್ ರಾವ್ ಆತ್ಮಹತ್ಯೆ!| ಹೈದರಾಬಾದ್ ನ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಮಾಜಿ ಸ್ಪೀಕರ್| ಹಿರಿಯ ರಾಜಕಾರಣಿ ಕಳೆದುಕೊಂಡ ಟಿಡಿಪಿ

ಹೈದರಾಬಾದ್[ಸೆ.16]: ಆಂಧ್ರಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಟಿಡಿಪಿ ನಾಯಕ ಕೊಡೆಲ ಶಿವಪ್ರಸಾದ್‌ ರಾವ್ ಹೈದರಾಬಾದ್ ನ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 72 ವರ್ಷದ ಕೊಡೆಲ ಶಿವಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾವ್ ಟಿಡಿಪಿ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲೊಬ್ಬರಾಗಿದ್ದರು. 

ನಾಪತ್ತೆಯಾಗಿದ್ದ ಆಂಧ್ರ ವಿಧಾನಸಭೆ ಪೀಠೋಪಕರಣ ಮಾಜಿ ಸ್ಪೀಕರ್‌ ಪುತ್ರನ ಶೋರೂಂನಲ್ಲಿ!

ಆಂದ್ರಪ್ರದೇಶವನ್ನು ತೆಲಂಗಾಣವಾಗಿ ವಿಭಜನೆಗೊಳಿಸಿದ ಬಳಿಕ, 2014ರಲ್ಲಿ ಕೊಡೆಲ ಶಿವಪ್ರಸಾದ್‌ ರಾವ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. 1983ರಲ್ಲಿ ಅವರು ಟಿಡಿಪಿ[ತೆಲುಗು ದೇಶಂ ಪಕ್ಷ] ಸೇರಿದ್ದ ರಾವ್, ನರ್ಸಾರಾವ್ ಪೇಟೆಯಿಂದ 5 ಬಾರಿ ಹಾಗೂ ಸಟ್ಟೇನಪಲ್ಲಿಯಿಂದ ಒಂದು ಬಾರಿ ಹೀಗೆ ಬರೋಬ್ಬರಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇಷ್ಟೇ ಅಲ್ಲದೇ ಅವರು ಆಂಧ್ರಪ್ರದೇಶದ ಗೃಹ ಸಚಿವ ಹಾಗೂ ಪಂಚಾಯತ್ ರಾಜ್ ಸಚಿವರಾಗಿಯೂ ಕಾತರ್ಯ ನಿರ್ವಹಿಸಿದ್ದಾರೆ. 

ರೈತ ಕುಟುಂಬದಲ್ಲಿ ಜನಿಸಿದ್ದ ಕೊಡೆಲ ಶಿವಪ್ರಸಾದ್‌ ರಾವ್ ಓರ್ವ ವೈದ್ಯರೂ ಹೌದು. ಕಾರ್ನೂಲ್ ನ ಗುಂಟೂರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದ ಅವರು, ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 

click me!