
ನವದೆಹಲಿ: ಪಿಎನ್‌ಬಿ ಹಗರಣ ಸೇರಿದಂತೆ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರು. ಸಾಲ ಪಡೆದು, ಹಿಂದಿರುಗಿಸದೆ ವಂಚಿಸಿ ಉದ್ಯಮಿಗಳು ವಿದೇಶಕ್ಕೆ ಪರಾರಿಯಾಗುತ್ತಿರುವ ಸಾಕಷ್ಟುಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಸ್ಥಿತಿಯಲ್ಲಿ, ಅಂತಹ ಪರಾರಿಕೋರ ಉದ್ಯಮಿಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ.
ಬ್ಯಾಂಕ್‌ಗಳ ಸಾಲ ಪಾವತಿಸದೆ ಉದ್ದೇಶಿತ ಸುಸ್ಥಿದಾರರು ಎಂದು ಗುರುತಿಸಲ್ಪಟ್ಟ91 ಮಂದಿಯ ವಿದೇಶ ಪ್ರಯಾಣ ನಿರ್ಬಂಧಿತರ ಪಟ್ಟಿಸಿದ್ಧಪಡಿಸಲಾಗಿದೆ. ಉದ್ದೇಶಿತ ಸುಸ್ಥಿದಾರರು ದೇಶಬಿಟ್ಟು ಪರಾರಿಯಾಗುವುದನ್ನು ತಡೆಯಲು ಈ ಪಟ್ಟಿಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಆರ್ಥಿಕ ಅಪರಾಧಿಗಳು ದೇಶಬಿಟ್ಟು ಪರಾರಿಯಾದಲ್ಲಿ, ಅವರ ಸಮಗ್ರ ಆಸ್ತಿ ಮುಟ್ಟುಗೋಲು ಹಾಕುವುದಕ್ಕೆ ಅವಕಾಶ ನೀಡುವ ಮಸೂದೆ ಮಂಜೂರಾತಿಗೆ ಈಗಾಗಲೇ ಸಂಸತ್ತಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.