
ಇಸ್ಲಾಮಾಬಾದ್(ಜು.27): ಅದರಂತೆ ಪಾಕಿಸ್ತಾನದ ಈ ಬಾರಿಯ ಸಾರ್ವತ್ರಿಕ ಚುನಾವಣೆ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಇದೇ ಬಾರಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಹಿಂದೂ ನಾಯಕರೊಬ್ಬರು ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಮಹೇಶ್ ಕುಮಾರ್ ಮಲಾನಿ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಪಾಕಿಸ್ತಾನದಲ್ಲಿ ಸುರಕ್ಷತೆ ಇಲ್ಲ ಎಂಬ ನೋವಿನ ಮಧ್ಯೆಯೇ, ಹಿಂದೂ ನಾಯಕನೋರ್ವ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗಿರುವುದು ಪರಿಸ್ಥಿತಿ ಬದಲಾವಣೆಯ ಆಶಾಭಾವ ಮೂಡಿಸಿದೆ.
ದಕ್ಷಿಣ ಸಿಂಧ್ ಪ್ರಾಂತ್ಯದ ತಾರಪಾರಾಕರ್ ಕ್ಷೇತ್ರದಿಂದ ಮಹೇಶ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಒಟ್ಟು 37,245 ಮತ ಪಡೆದಿರುವ ಮಹೇಶ್ ತಮ್ಮ ಪ್ರತಿಸ್ಪರ್ಧಿ ಅರಬ್ ಜಕುಲ್ಲಾ ಅವರನ್ನು ಸೋಲಿಸಿದ್ದಾರೆ. ರಾಜಸ್ಥಾನಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮಹೇಶ್, ೨೦೦೩ ರಿಂದ ೨೦೦೮ರ ವರೆಗೆ ಪಿಪಿಪಿ ನಾಮನಿರ್ದೇಶಕ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮಹೇಶ್ ಅವರ ಜಯಭೇರಿ ಪಾಕಿಸ್ತಾನದಲ್ಲಿ ಹೊಸ ಅವಕಾಶದ ಬಾಗಿಲೊಂದನ್ನು ತೆರೆದಿದ್ದು, ಅಲ್ಪಸಂಖ್ಯಾತ ಹಿಂದೂ ಸಮುದಾಯ ಪಾಕಿಸ್ತಾನದಲ್ಲಿ ಇನ್ನು ಮುಂದೆ ನಿರ್ಭಯವಾಗಿ ಉಸಿರಾಡಬಹುದು ಎಂಬ ಆಶಾಭಾವ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.