
ಮಡಿಕೇರಿ(ಜು.02): ಕನ್ನಡದ ಉದಯೋನ್ಮುಕ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚತಾರ್ಥ ಸಮಾರಂಭ ಇಂದು ಸಂಜೆ ವಿರಾಜಪೇಟೆಯಲ್ಲಿರುವ ಮಂದಣ್ಣ ಅವರ ಮಾಲೀಕತ್ವದ ಸೆರೆನಿಟಿ ಹಾಲ್'ನಲ್ಲಿ ನಡೆಯಲಿದೆ.
ನಿಶ್ಚಿತಾರ್ಥದಲ್ಲಿ 1500 ಮಂದಿ ಆಹ್ವಾನಿತರು ಭಾಗವಹಿಸುವ ನಿರೀಕ್ಷೆಯಿದೆ. ಹಲವು ಮಂದಿ ಸಿನಿಮಾ ದಿಗ್ಗಜರು, ಜನಪ್ರತಿನಿಧಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ರಕ್ಷಿತ್ ಶೆಟ್ಟಿ ಕುಟುಂಬಸ್ಥರು ಉಡುಪಿಯಿಂದ ನಿನ್ನೆಯೇ ವೀರಾಜಪೇಟೆಗೆ ಆಗಮಿಸಿದ್ದಾರೆ. ಇನ್ನು ದುಬೈನಲ್ಲಿ ಶೂಟಿಂಗ್'ನಲ್ಲಿದ್ದ ರಶ್ಮಿಕಾ ಕೂಡಾ ನಿನ್ನೆ ರಾತ್ರಿ ವಿರಾಜಪೇಟೆಗೆ ಆಗಮಿಸಿದ್ದಾರೆ.
ರಾತ್ರಿ ನಿಶ್ಚಿತಾರ್ಥದ 'ಡಿನ್ನರ್ ಪಾರ್ಟಿ' ಆಯೋಜಿಸಲಾಗಿದೆ. ಕೊಡಗಿನ ಹೆಸರಾಂತ ಬಾಣಸಿಗ ರಾಮ್ ದಾಸ್ ನೇತೃತ್ವದಲ್ಲಿ ಒಟ್ಟು 50 ಜನರ ತಂಡ ಕೊಡಗಿನ ವಿಶೇಷ ಖಾದ್ಯಗಳನ್ನು ತಯಾರಿಸಲಿದ್ದಾರೆ. ಈ ಕಿರಿಕ್ ಜೋಡಿಯ ಡಿನ್ನರ್ ಪಾರ್ಟಿಯ ಊಟದ ಮೆನುವಿನಲ್ಲಿ ಯಾವ್ಯಾವ ಖಾದ್ಯಗಳಿವೆ ಎಂಬುವುದರ ಪಟ್ಟಿ ಹೀಗಿದೆ.
ಮ್ಯಾಂಗೋ ಮಸಾಲಾ ಪಾರ್ಟಿ ವೇಳೆ: ಚಿಕನ್ ಲಾಲಿಪಪ್, ಪೋರ್ಕ್ ಡ್ರೈ, ಚಿಕನ್ ಡ್ರೈ, ಫಿಂಗರ್ ಚಿಪ್ಸ್, ಚಿಲ್ಲಿ ಮಟನ್, ಟೀತರ್ ಫ್ರೈ, ಕ್ಯಾಸಿವ್ ಮಸಾಲಾ, ಸಿಪಿ ಸಾಲಾಡ್ ಇರಲಿದೆ.
ಡಿನ್ನರ್'ಗಾಗಿ ಕೊಡಗು ಶೈಲಿಯ ನೂಪುಟ್ಟು ಕೋಳಿ ಕರಿ, ಕಡಂಬುಟ್ಟು ಪೋರ್ಕ್ ಕರಿ, ಮಟನ್ ಬಿರಿಯಾನಿ, ಆನಿಯನ್ ರೈತಾ, ವೈಟ್ ರೈಸ್, ರಸಂ, ಪೆಪ್ಪರ್ ಚಿಕನ್ ಮಸಾಲಾ, ಫೋರ್ಕ್ ಚಾಪ್ಸ್, ಫೋರ್ಕ್ ಡ್ರೈ, ಮಟನ್ ಮಸಾಲಾ, ಮಟನ್ ಚಾಪ್ಸ್, ಚೈನೀಸ್ ಐಟಂಗಳಾದ ವೆಜ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್, ನ್ಯೂಡಲ್ಸ್, ಚಿಕನ್ ನ್ಯೂಡಲ್, ಸ್ವೀಟ್ & ಸಾಲ್ಟ್ ಚಿಕನ್, ಬಟರ್ ಮತ್ತು ನಾನ್ ಬಟರ್ ವ್ಯವಸ್ಥೆ ಕುಲ್ಚಾ, ಕಡಾಯ್ ಚಿಕನ್, ಪಾಲಾಕ್ ಪನ್ನೀರ್ , ಕಡಾಯ್ ವೆಜ್, ದಾಲ್ ಕರಿ ಇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.