ಡಿಸಿಯನ್ನು ವರ್ಗಾಯಿಸಿ, ಇಲ್ಲದಿದ್ದರೆ ರಾಜೀನಾಮೆ: ಉತ್ತರ ಪ್ರದೇಶ ಸಚಿವನ ‘ಬೆದರಿಕೆ’

By Suvarna Web DeskFirst Published Jul 3, 2017, 2:15 PM IST
Highlights

ದುರ್ವರ್ತನೆ ತೋರಿದ ಬಿಜೆಪಿ ಮುಖಂಡರನ್ನು ಕಂಬಿ ಹಿಂದೆ ಹಾಕಿದ ಪೊಲೀಸ್ ಅಧಿಕಾರಿಣಿಗೆ ವರ್ಗಾವಣೆ ಶಿಕ್ಷೆ ನೀಡಿ ಮುಜುಗರಕ್ಕೊಳಗಾದ ಯೋಗಿ ಸರ್ಕಾರಕ್ಕೆ ಇನ್ನೊಂದು ಸವಾಲೆದುರಾಗಿದೆ.

ಲಕ್ನೋ (ಜು.03): ದುರ್ವರ್ತನೆ ತೋರಿದ ಬಿಜೆಪಿ ಮುಖಂಡರನ್ನು ಕಂಬಿ ಹಿಂದೆ ಹಾಕಿದ ಪೊಲೀಸ್ ಅಧಿಕಾರಿಣಿಗೆ ವರ್ಗಾವಣೆ ಶಿಕ್ಷೆ ನೀಡಿ ಮುಜುಗರಕ್ಕೊಳಗಾದ ಯೋಗಿ ಸರ್ಕಾರಕ್ಕೆ ಇನ್ನೊಂದು ಸವಾಲೆದುರಾಗಿದೆ.

ತನ್ನ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡದಿದ್ದಲ್ಲಿ ರಾಜಿನಾಮೆ ನೀಡುವುದಾಗಿ ಉತ್ತರ ಪ್ರದೇಶದ ಸಂಪುಟ ಸಚಿವರು ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್’ಗೆ ‘ಬೆದರಿಕೆ’ ಹಾಕಿದ್ದಾರೆ.

Latest Videos

ಗಾಝಿಪುರ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಖಾತ್ರಿಯವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಸಚಿವ ಓಮ್ ಪ್ರಕಾಶ್ ರಾಜಭರ್ ಬೇಡಿಕೆಯಿಟ್ಟಿದ್ದಾರೆ.

ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ; ಒಂದು ವೇಳೆ ವರ್ಗಾವಣೆ ಮಾಡದಿದ್ದಲ್ಲಿ ನಾನು ರಾಜಿನಾಮೆ ನೀಡುತ್ತೇನೆಂದು ರಾಜಭರ್ ಹೇಳಿದ್ದಾರೆ.

ಸಚಿವನ ಬೇಡಿಕೆಗೆ ಬೆಲೆಯಿಲ್ಲವೆಂದಾದಲ್ಲಿ, ಹುದ್ದೆಯಲ್ಲಿ ಮುಂದುವರಿದು ಪ್ರಯೋಜನವಿಲ್ಲವೆಂದು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ವರ್ಗಾವಣೆಗೆ ಒತ್ತಾಯಿಸಿ ಧರಣಿಯನ್ನು ಹಮ್ಮಿಕೊಳ್ಳುವುದಾಗಿ ರಾಜಭರ್ ಹೇಳಿದ್ದರು. ಜಿಲ್ಲಾಧಿಕಾರಿ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

click me!