
ನವದೆಹಲಿ(ಸೆ.20): ಅಬಕಾರಿ ಸುಂಕ ಇಳಿಸುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿತ ಮಾಡಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಜೊತೆಗೆ ಅವರ ಈ ನಿರ್ಧಾರ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ಅವುಗಳ ಬೆಲೆ ಇಳಿಕೆಗೆ ಕಾರಣವಾಗಬೇಕು ಎಂಬ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಬೇಡಿಕೆಯನ್ನೂ ತಿರಸ್ಕರಿಸಿದಂತಿದೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ’ಸಾರ್ವಜನಿಕ ವೆಚ್ಚಕ್ಕಾಗಿ ಸರ್ಕಾರಕ್ಕೆ ಆದಾಯ ಬೇಕಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಅಗತ್ಯವಿದೆ. ಸರ್ಕಾರ ನಡೆಸಲು ಕಂದಾಯದ ಅಗತ್ಯವಿದೆ ಎಂಬುದು ನಿಮಗೆ ನೆನಪಿರಲಿ. ಹೆದ್ದಾರಿಗಳನ್ನು ನೀವು ಹೇಗೆ ನಿರ್ಮಿಸುತ್ತೀರಿ? ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಸರ್ಕಾರ ಸಾರ್ವಜನಿಕ ವೆಚ್ಚ ಹೆಚ್ಚಿಸುತ್ತಿದೆ. ಜಿಡಿಪಿ ಏನಿದೆಯೋ, ಅದು ಸಾರ್ವಜನಿಕ ವೆಚ್ಚ ಮತ್ತು ಎಫ್‌ಡಿಐ ಬೆಂಬಲಿತವಾಗಿದೆ. ಸಾರ್ವಜನಿಕ ವೆಚ್ಚ ಕಡಿತಗೊಳಿಸಿದಲ್ಲಿ, ಸಾಮಾಜಿಕ ವಲಯದ ಯೋಜನೆಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸುವುದು ಎಂದರ್ಥ’ ಎಂದು ಜೇಟ್ಲಿ ತಮ್ಮ ವಾದವನ್ನು ಸಮರ್ಥಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.