ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ಶುರುವಾಗಿದೆ ಕ್ಷಣಗಣನೆ

Published : Sep 20, 2017, 10:25 PM ISTUpdated : Apr 11, 2018, 12:44 PM IST
ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ  ಶುರುವಾಗಿದೆ ಕ್ಷಣಗಣನೆ

ಸಾರಾಂಶ

ನಾಡಹಬ್ಬ ದಸರಾ ಮಹೋತ್ಸವಕ್ಕೆ ನಾಳೆ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. 2017ರ ದಸರಾ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆದಿದ್ದು, ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ದಸರಾಗೆ ಚಾಲನೆ ನೀಡಲು ಕುಟುಂಬ ಸಮೇತ ಆಗಮಿಸಿದ್ದಾರೆ. ನವರಾತ್ರಿ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗಿದೆ.

ಮೈಸೂರು (ಸೆ.15): ನಾಡಹಬ್ಬ ದಸರಾ ಮಹೋತ್ಸವಕ್ಕೆ ನಾಳೆ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. 2017ರ ದಸರಾ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆದಿದ್ದು, ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ದಸರಾಗೆ ಚಾಲನೆ ನೀಡಲು ಕುಟುಂಬ ಸಮೇತ ಆಗಮಿಸಿದ್ದಾರೆ. ನವರಾತ್ರಿ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗಿದೆ.

ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ನಾಳೆ ಗಣ್ಯರ ಸಮ್ಮುಖದಲ್ಲಿ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡೋ ಮೂಲಕ ನವರಾತ್ರಿ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8.45ರ ಶುಭ ತುಲಾ ಲಗ್ನದಲ್ಲಿ ನಾಡಹಬ್ಬಕ್ಕೆ ಚಾಲನೆ ಸಿಗಲಿದೆ. ಇಂದು ಮೈಸೂರಿಗೆ ಪತ್ನಿ ಸಮೇತ ಆಗಮಿಸಿದ ನಿಸಾರ್ ಅಹಮದ್ ಅವರಿಗೆ ಜಿಲ್ಲಾಡಳಿತ ಅದ್ದೂರಿಯಾಗಿ ಸ್ವಾಗತ ಕೋರಿತು. ಇನ್ನೂ ನಾಳೆ ಬೆಳಗ್ಗೆ ಚಾಮುಂಡಿ ತಾಯಿಗೆ ರುದ್ರಾಭೀಷೇಕ, ಪಂಚಾಮೃತಾಭಿಷೇಕ.. ನವರಾತ್ರಿ ಯಂತ್ರಾರ್ಚನೆ ಬಳಿಕ ಸಿಎಂ ಸೇರಿದಂತೆ ಪ್ರಮುಖರು ಸಮ್ಮುಖದಲ್ಲಿ ಚಾಮುಂಡಿಯ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತೆ. ಇದಾದ ಬಳಿಕ ರಥದಲ್ಲಿ ಉತ್ಸವ ಮೂರ್ತಿಯನ್ನ ಉದ್ಘಾಟನಾ ಸ್ಥಳಕ್ಕೆ ತಂದು ಪೂಜಿಸಿದ ಬಳಿಕ ದಸರಾಗೆ ಚಾಲನೆ ನೀಡಲಾಗುತ್ತೆ.

ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ಸಿಗುತ್ತಲೇ.. ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಲಿದೆ. ಯದುವೀರ್ ಒಡೆಯರ್ ಮಧ್ಯಾಹ್ನ 12 ಗಂಟೆಗೆ ರತ್ನಖಚಿತ ಸಿಂಹಾಸವನ್ನೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಪತ್ನಿ ತ್ರಿಷಿಕಾ ಕುಮಾರಿ ಸಹ ಭಾಗವಹಿಸಲಿದ್ದಾರೆ. ಇದೆಲ್ಲದರ ಜೊತೆಗೆ ವಸ್ತು ಪ್ರದರ್ಶನ ಆವರಣದಲ್ಲಿರುವ ಕುಸ್ತಿ ಪಂದ್ಯಾವಳಿ, ಕಲಾಮಂದಿರದ ಚಲನಚಿತ್ರೋತ್ಸವ, ದಸರಾ ವಸ್ತು ಪ್ರದರ್ಶನಗಳಿಗೂ ಚಾಲನೆ ಸಿಗಲಿದೆ...  ಒಟ್ಟಿನಲ್ಲಿ ನಾಳೆಯಿಂದ ಮೈಸೂರಲ್ಲಿ ಸಂಭ್ರಮವೋ ಸಂಭ್ರಮ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ