ಫ್ಲಿಪ್'ಕಾರ್ಟ್'ನಲ್ಲಿ ಒಂದೇ ದಿನ ಹೊಸ ದಾಖಲೆಯ ಮಾರಾಟ

By Web DeskFirst Published Oct 5, 2016, 9:27 AM IST
Highlights

ಬೆಂಗಳೂರು(ಅ. 05): ಇ-ಕಾಮರ್ಸ್ ಇತಿಹಾಸದಲ್ಲಿ ಫ್ಲಿಪ್'ಕಾರ್ಟ್ ಹೊಸ ದಾಖಲೆ ಬರೆದಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಆಫರ್'ಗಳನ್ನು ಕೊಡುತ್ತಿರುವ ಫ್ಲಿಪ್'ಕಾರ್ಟ್ ಮೊನ್ನೆ ಸೋಮವಾರ ಒಂದೇ ದಿನದಲ್ಲಿ ಬರೋಬ್ಬರಿ 1,400 ಕ ರೂಪಾಯಿ ವಹಿವಾಟು ನಡೆಸಿದೆ. ಇವುಗಳ ಪೈಕಿ ಸ್ಮಾರ್ಟ್'ಫೋನ್'ಗಳ ಮಾರಾಟವೇ ಅಧಿಕವೆನ್ನಲಾಗಿದೆ. 2015ರಲ್ಲಿ ಫ್ಲಿಪ್'ಕಾರ್ಟ್ ಐದು ದಿನಗಳ ಹಬ್ಬದ ರಿಯಾಯಿತಿ ಮಾರಾಟದ ವೇಳೆ 2 ಸಾವಿರ ಕೋಟಿ ವಹಿವಾಟು ನಡೆಸಿತ್ತು. ಈ ವರ್ಷ ಒಂದೇ ದಿನದಲ್ಲಿ 1,400 ಕೋಟಿ ರೂ. ಮೌಲ್ಯದ ವಸ್ತುಗಳು ಮಾರಾಟವಾಗಿರುವುದು ಗಮನಾರ್ಹ.

ಇಷ್ಟು ಪ್ರಮಾಣದಲ್ಲಿ ಮಾರಾಟ ಹೆಚ್ಚಳವಾಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಫ್ಲಿಪ್'ಕಾರ್ಟ್ ಸಿಇಓ ಬಿನ್ನಿ ಬನ್ಸಾಲ್, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. ತಮ್ಮ ಹಬ್ಬದ ಕೊಡುಗೆಗಳ ಆಫರ್'ನಿಂದಾಗಿ ಲಕ್ಷಾಂತರ ಹೊಸ ಗ್ರಾಹಕರು ಇ-ಮಾರುಕಟ್ಟೆಗೆ ಬಂದಿದ್ದಾರೆ. ಭಾನುವಾರ ಶುರುವಾದ ಆನ್'ಲೈನ್ ಮಾರಾಟ ಮೇಳದಲ್ಲಿ ಮಾಮೂಲಿಯ ದಿನಕ್ಕಿಂತ ಐದು ಪಟ್ಟು ಹೆಚ್ಚು ಜನರು ಫ್ಲಿಪ್'ಕಾರ್ಟ್'ಗೆ ಭೇಟಿ ನೀಡಿದ್ದಾರೆ ಎಂದು ಬಿನ್ನಿ ಬನ್ಸಾಲ್ ಹೇಳಿಕೊಂಡಿದ್ದಾರೆ.

ಈ ವರ್ಷ ಫ್ಲಿಪ್'ಕಾರ್ಟ್ ಅಷ್ಟೇ ಅಲ್ಲ, ಅಮೇಜಾನ್ ಕೂಡ ಒಳ್ಳೆಯ ಮಾರಾಟ ಕಂಡಿದೆ. ಫ್ಲಿಪ್'ಕಾರ್ಟ್ ಮತ್ತು ಅಮೇಜಾನ್ ಕಂಪನಿಗಳು ಕಳೆದ ವರ್ಷಕ್ಕಿಂತ ಈ ಬಾರಿ ಶೇ.40ರಷ್ಟು ಮಾರಾಟ ಹೆಚ್ಚಳ ಕಂಡಿವೆ. ಉತ್ಪನ್ನದ ಗುಣಮಟ್ಟ ಹಾಗೂ ಕರಾರುವಾಕ್ ಡೆಲಿವರಿಯು ಈ ಕಂಪನಿಯ ಯಶಸ್ಸಿಗೆ ಕಾರಣವಾಗಿದೆ ಎನ್ನಲಾಗಿದೆ.

click me!