ತೈಫೂನ್ ಚಂಡಮಾರುತದಿಂದ ವಿಮಾನ ಪವಾಡ ಸದೃಶ ಪಾರು

Published : Sep 20, 2018, 09:36 AM ISTUpdated : Sep 20, 2018, 09:43 AM IST
ತೈಫೂನ್ ಚಂಡಮಾರುತದಿಂದ ವಿಮಾನ ಪವಾಡ ಸದೃಶ ಪಾರು

ಸಾರಾಂಶ

ಚೀನಾದ ಶಾಂಜೇನ್‌ನಲ್ಲಿ ಡ್ರ್ಯಾಗನ್ ವಿಮಾನಕ್ಕೆ ತೈಫೂನ್ ಚಂಡಮಾರುತ ಅಪ್ಪಳಿಸಿತ್ತು. ಆದಾಗ್ಯೂ ಪ್ರಾಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬೀಜಿಂಗ್ (ಸೆ. 20):  ಚೀನಾದ ಶಾಂಜೇನ್‌ನಲ್ಲಿ ಡ್ರ್ಯಾಗನ್ ವಿಮಾನಕ್ಕೆ ತೈಫೂನ್ ಚಂಡಮಾರುತ ಅಪ್ಪಳಿಸಿತ್ತು. ಆದಾಗ್ಯೂ ಪ್ರಾಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅದರೊಂದಿಗೆ ‘ಬೀಜಿಂಗ್ ಕ್ಯಾಪಿಟಲ್ ಏರ್‌ಲೈನ್ಸ್‌ನಲ್ಲಿ ಒಟ್ಟಾರೆ 166 ಜನ ಪ್ರಯಾಣಿಕರಿದ್ದರು. ಅದರಲ್ಲಿ 5 ಜನ ಪ್ರಯಾಣಿಕರು ಸ್ವಲ್ಪಮಟ್ಟಿಗೆ ಗಾಯಗೊಂಡಿದ್ದಾರೆ’ ಎಂಬ ಒಕ್ಕಣೆಯನ್ನೂ ಬರೆಯಲಾಗಿದೆ. ಈ ವಿಡಿಯೋವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಮೊದಲ ಅರ್ಧಭಾಗದ ವಿಡಿಯೋ ಕಪ್ಪುಬಿಳುಪು ಬಣ್ಣದಲ್ಲಿದ್ದರೆ, ಉಳಿದ ಅರ್ಧ ಭಾಗ ಬಣ್ಣದಿಂದ ಕೂಡಿದೆ.

ಮೊದಲಿಗೆ ವಿಮಾನವೊಂದು ಚಂಡಮಾರುತ ಅಪ್ಪಳಿಸಿದ್ದಕ್ಕೆ ಅಪಾಯಕಾರಿಯಾಗಿ ಗಾಳಿಯಲ್ಲಿ ತೇಲಾಡುತ್ತಾ ಲ್ಯಾಂಡ್ ಆಗುತ್ತದೆ. ಅನಂತರದಲ್ಲಿ ಜಾರುಬಂಡಿಯಂತೆ ಪ್ರಯಾಣಿಕರು ವಿಮಾನದಿಂದ ಜಾರಿ ಕೆಳಗಿಳಿಯುತ್ತಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಚೀನಾದಲ್ಲಿ ಚಂಡಮಾರುತ ಅಪ್ಪಳಿಸಿ ವಿಮಾನವೊಂದು ಅಪಾಯಕ್ಕೆ ಸಿಲುಕಿತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ.

ಏಕೆಂದರೆ ಇದು ನಿಜವಾದ ವಿಡಿಯೋವೇ ಅಲ್ಲ. ಇದೊಂದು ಆ್ಯನಿಮೇಟೆಡ್ ವಿಡಿಯೋ. ಅಲ್ಲದೆ ಒಕ್ಕಣೆಯಲ್ಲಿ ಒಂದು ಕಡೆಗೆ ಡ್ರ್ಯಾಗನ್ ಏರ್‌ಲೈನ್ಸ್ ಎಂದು ಹೇಳಿದ್ದರೆ ಇನ್ನೊಂದು ಕಡೆ ಬೀಜಿಂಗ್ ಏರ್‌ಲೈನ್ಸ್ ಎಂದು ಹೇಳಲಾಗಿದೆ. ಡ್ರ್ಯಾಗನ್ ಏರ್‌ಲೈನ್ಸ್ ಹಾಂಕಾಂಗ್‌ನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ. ಸದ್ಯ ಅದನ್ನು ಕ್ಯಥೆ ಡ್ರ್ಯಾಗನ್ ಎಂದು ಕರೆಯಲಾಗುತ್ತದೆ. ಇನ್ನು ಬೀಜಿಂಗ್ ಏರ್‌ಲೈನ್ಸ್ ಚೀನಾದ ಅತಿ ಅಗ್ಗದ ಏರ್‌ಲೈನ್ಸ್.

ಅಲ್ಲದೆ ವಿಡಿಯೋದ ಮೊದಲ ಭಾಗದಲ್ಲಿ ಬೋಯಿಂಗ್ 737 ವಿಮಾನ ಇದ್ದರೆ, 2 ನೇ ಭಾಗದಲ್ಲಿ 320 ಬೀಜಿಂಗ್ ಏರ್ ಲೈನ್ಸ್ ಇದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

-ವೈರಲ್ ಚೆಕ್ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು; ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಗಣ್ಯರ ದಂಡು!