
ನವದೆಹಲಿ(ನ.02): ಫೋರ್ಬ್ಸ್ ತನ್ನ 2017ನೇ ವಿಶ್ವ ಪ್ರಭಾವಶಾಲಿ ಮಹಿಳೆಯರ 100 ಮಂದಿಯ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಐವರು ಭಾರತೀಯ ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ.
ಪಟ್ಟಿಯಲ್ಲಿ ಬೆಂಗಳೂರಿನ ಉದ್ಯಮಿ ಬಯೋಕಾನ್'ನ ಕಿರಣ್ ಮಜುಂದಾರ್ ಷಾ 64ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಐಸಿಐಸಿಐ ಬ್ಯಾಂಕ್'ನ ಸಿಇಒ ಚಂದಾ ಕೊಚ್ಚಾರ್(32), ಹೆಚ್'ಸಿಎಲ್ ಎಂಟರ್'ಪ್ರೈಸಸ್ ಸಿಇಒ ರೋಷ್ನಿ ನಾಡರ್ ಮಲ್ಹೋತ್ರಾ(57), ಹಿಂದೂಸ್ತಾನ್ ಟೈಮ್ಸ್' ಸಂಸ್ಥೆಯ ಅಧ್ಯಕ್ಷೆ ಶೋಭನಾ ಬಾರ್ತಿಯಾ (97) ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ(97)ನೇ ಸ್ಥಾನ ಪಡೆದುಕೊಂಡಿದ್ದಾರೆ.
ದೇಶದ ಚಾನ್ಸ್'ಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನ, ಇಂಗ್ಲೆಂಡ್ ಪ್ರಧಾನಮಂತ್ರಿ ಥರೇಸಾ ಮೇ 2ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಮಾಧ್ಯಮ, ತಾಂತ್ರಿಕತೆ, ವ್ಯವಹಾರ, ಸಾಮಾಜಿಕ ಸೇವೆ, ರಾಜಕೀಯ ಹಾಗೂ ಹಣಕಾಸು ಕ್ಷೇತ್ರಗಳಲ್ಲಿ ಕಂಪನಿಯ ಆರ್ಥಿಕತೆ, ಪ್ರಭಾವ ಮುಂತಾದ ಅಂಶಗಳ ಮಾನದಂಡಗಳನ್ನು ಆಧರಿಸಿ ಸ್ಥಾನ ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.