
ಬೆಂಗಳೂರು[ಅ.08]: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದ ಬಳಿ 72 ವರ್ಷಗಳ ಬಳಿಕ ಮೊದಲ ಬಾರಿ ಶಾರದಾ ಪೂಜೆ ನಡೆದಿದೆ. ಹಾಂಕಾಂಗ್ ಮೂಲದ ಭಾರತೀಯ ಸಂಜಾತ ಹಿಂದೂ ದಂಪತಿಗಳು ಈ ಪೂಜೆ ನೆರವೇರಿಸಿದ್ದಾರೆ.
ಭಾರತಕ್ಕೆ ಹೋಗಬೇಡಿ: ಪಿಒಕೆ ನಾಗರಿಕರಿಗೆ ಇಮ್ರಾನ್ ಎಚ್ಚರಿಕೆ!
ಹೌದು ಶಂಕರಾಚಾರ್ಯರು ಕಾಶ್ಮೀರದಲ್ಲಿ ಸ್ಥಾಪಿಸಿದ್ದ ಶಾರದಾ ಪೀಠದಲ್ಲಿ ಹಲವಾರು ವರ್ಷಗಳಿಂದ ಪೂಜೆಯೇ ನಡೆದಿಲ್ಲ. ಹೀಗಿರುವಾಗ ಬರೋಬ್ಬರಿ 72 ವರ್ಷಗಳ ಬಳಿಕ ಅಲ್ಲಿ ಶಾರದಾ ಪೂಜೆ ನಡೆದಿದೆ. ಪೀಠದ ಬಳಿ ಇರುವ ಕಿಶನ್ ಗಂಗಾ ನದಿ ದಂಡೆಯ ಮೇಲೆ, ಶಾರದಾ ರಕ್ಷಣಾ ಸಮಿತಿಯ ಸಹಯೋಗದೊಂದಿಗೆ ಈ ಪೂಜೆ ನಡೆದಿದೆ.
ಪ್ರಧಾನಿ ಅಮೆರಿಕ ಪ್ರವಾಸ: ಭಾರತದ ಭವಿಷ್ಯಕ್ಕೆ ಮೋದಿ ವಿಶ್ವಾಸ!
ಹಾಂಕಾಂಗ್ ನ ವೆಂಕಟರಮಣ ಮತ್ತು ಸುಜಾತಾ ದಂಪತಿ ಶಾರದಾ ಪೀಠದಲ್ಲಿ ಪೂಜೆ ಸಲ್ಲಿಸುವ ಸಲುವಾಗಿಯೇ ಅಧಿಕೃತ ವೀಸಾ ಪಡೆದು ಮುಜಫರಾಬಾದ್ ಗೆ ತೆರಳಿದ್ದರು. ಆದರೆ ಶಾರದಾ ಪೀಠಕ್ಕೆ ತೆರಳಲು NOC ಸಿಕ್ಕಿರಲಿಲ್ಲ. ಹೀಗಿರುವಾಗ ಪಾಕಿಸ್ತಾನದ ಸಿವಿಲ್ ಸೊಸೈಟಿ ಸದಸ್ಯರು ಆಡಳಿತ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡು ಶಾರದಾ ಪೀಠಕ್ಕೆ ತೆರಳಲು ಅನುಮತಿ ಕೊಡಿಸಿದ್ದರು. ಆದರೆ ಪೀಠದಲ್ಲೇ ಪೂಜೆ ನಡೆಸಲು ಅವಕಾಶ ಕೊಡಲಿಲ್ಲ. ಈ ಕಾರಣದಿಂದ ಪೀಠದ ಬಳಿ ಇರುವ ನದಿ ದಂಡೆಯಲ್ಲಿ ದಂಪತಿ ಪೂಜೆ ನೆರವೇರಿಸಿದ್ದಾರೆ.
ಸದ್ಯ ಈ ದಂಪತಿ ಶಾರದಾ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಅಗುತ್ತಿದ್ದು, ಭಾರತೀಯರಿಗೆ ಸಂತಸ ಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.