ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಕಸಿ

By Suvarna Web DEskFirst Published Dec 31, 2016, 2:45 AM IST
Highlights

ಹೃದಯವನ್ನು ಸಾಗಿಸಲು ಮಣಿಪಾಲ್ ಆಸ್ಪತ್ರೆ ಯಿಂದಜಯದೇವ ಆಸ್ಪತ್ರೆಯವರೆಗೆ ಗ್ರೀನ್ ಕಾರಿಡಾರ್ ಅಂದ್ರೆ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ನಿರ್ಮಿಸಲಾಗಿತ್ತು

ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ಬಳಿ ಇರೋ ಮಣಿಪಾಲ್ ಆಸ್ಪತ್ರೆಯಿಂದ ಜಯದೇವ ಅಸ್ಪತ್ರೆಗೆ ತಡ ರಾತ್ರಿ ಜೀವಂತ ಹೃದಯವನ್ನ ಯಶಸ್ವಿಯಾಗಿ ಸಾಗಿಸಲಾಯ್ತು.ಹೃದಯವನ್ನು ಸಾಗಿಸಲು ಮಣಿಪಾಲ್ ಆಸ್ಪತ್ರೆ ಯಿಂದ  ಜಯದೇವ ಆಸ್ಪತ್ರೆಯವರೆಗೆ ಗ್ರೀನ್ ಕಾರಿಡಾರ್ ಅಂದ್ರೆ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ನಿರ್ಮಿಸಲಾಗಿತ್ತು.ಬಡ ರೋಗಿ ಹಾಸನದ ಗಂಗಾಧರ್ ಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯ್ತು.ಗಂಗಾಧರ್ ಹಾಸನದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಅಸ್ಸಾಂ ಮೂಲದ ಬೆಂಗಳೂರು ನಿವಾಸಿ ಮರಿಯೋ ಮನೆಯಲ್ಲಿ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು..ಕಳೆದ ಎರಡು ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ ಮಾಡಿದ್ದರು..ಈ ಹಿನ್ನೆಲೆಯಲ್ಲಿ ನಿನ್ನೆ ತಡ ರಾತ್ರಿ ಮಣಿಪಾಲ್ ಆಸ್ಪತ್ರೆಯಿಂದ ಜೀವಂತ ಹೃದಯವನ್ನ ಜಯದೇವ ಆಸ್ಪತ್ರೆಗೆ ರವಾನಿಸಲಾಯ್ತು. ಅಂದ ಹಾಗೇ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಕಸಿ ಚಿಕಿತ್ಸೆ ನಡೆದಿರುವುದು ಇದೆ ಮೊದಲ ಬಾರಿ.

click me!