
ಲಕ್ನೋ[ಜು. 2] ಹೊಲ ಊಳುವ ಅಪ್ಪನಿಗೆ ಈ ಇಬ್ಬರು ಹೆಣ್ಣು ಮಕ್ಕಳೆ ಎತ್ತುಗಳು. ವರುಣದೇವ ಮತ್ತು ಇಂದ್ರ ದೇವನಿಗೆ ಉತ್ತಮ ಮಳೆಗೆ ಪ್ರಾರ್ಥನೆ ಮಾಡಿ ಪ್ರತಿದಿನ ಅಪ್ಪನ ಜತೆ ಹೊಲಕ್ಕೆ ಊಳುತ್ತಾರೆ. ಹೆಗಲ ಮೇಲೆ ನೊಗ ಹೊತ್ತು ಹೆಜ್ಜೆ ಹಾಕುತ್ತಾರೆ. ಅಷ್ಟೆ ಅಲ್ಲ ಹೆಣ್ಣು ಮಕ್ಕಳು ಈ ರೀತಿ ನೊಗ ಹೊತ್ತು ಗದ್ದೆ ಉಳುಮೆ ಮಾಡಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿ ಮೌರಾನಿಪುರದ 60 ವರ್ಷದ ರೈತ ಚೈಲಾಲ್ ಆರ್ವಾರ್ ಪುತ್ರಿಯರಾದ ರವೀನಾ ಮತ್ತು ಶಿವಾನಿ ಪ್ರತಿದಿನ ತಮ್ಮ ಅಪ್ಪನಿಗೆ ಸಹಾಯ ಮಾಡುತ್ತಾರೆ. ಕಳೆದ ನಾಲ್ಕು ವರ್ಷದಿಂದ ಭಾಗದಲ್ಲಿ ಮಳೆ ಇಲ್ಲ. ಆದರೂ ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದು ಅಪ್ಪನ ನೆರವಿಗೆ ನಿಂತಿರುವ ಹೆಣ್ಣು ಮಕ್ಕಳಿಗೊಂದು ಸಲಾಂ.. ಈ ಬಾರಿ ಉತ್ತಮ ಮಳೆಯಾಗಿ ಭರ್ಜರಿ ಫಸಲು ನಡ ಕುಟುಂಬದ ಹೊಟ್ಟೆ ತುಂಬಿಸಲಿ.
ರಾಜ್ಯದ ಸಾಗರ ಮತ್ತು ಸೊರಬ ತಾಲೂಕಿನಲ್ಲಿಯೂ ಇಂಥದ್ದೇ ಪ್ರಕರಣ ಹಿಂದೆ ವರದಿಯಾಗಿತ್ತು. ಎತ್ತಿನ ಬದಲು ಹೆಂಡತಿ ಮತ್ತು ಪುತ್ರ ನೊಗ ಎಳೆದು ಗದ್ದೆ ಉಳುಮೆ ಮಾಡಿದ ಸುದ್ದಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.