ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಭ್ರೂಣ ಹತ್ಯೆ : ಲೇಡಿ ವೈದ್ಯೆಯಿಂದಲೇ ಭ್ರೂಣ ಲಿಂಗ ಪತ್ತೆ ದಂಧೆ

Published : Nov 27, 2017, 08:17 AM ISTUpdated : Apr 11, 2018, 12:34 PM IST
ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಭ್ರೂಣ ಹತ್ಯೆ : ಲೇಡಿ ವೈದ್ಯೆಯಿಂದಲೇ ಭ್ರೂಣ ಲಿಂಗ ಪತ್ತೆ ದಂಧೆ

ಸಾರಾಂಶ

. ಅದಲ್ಲಿಯೂ ಹಿರಿಯ ವೈದ್ಯೆ ಅರುಣಾ ಅಕ್ಕಿ ಈ ದಂಧೆಯಲ್ಲಿ ಭಾಗಿಯಾಗಿರುವ ದೃಶ್ಯ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಭ್ರೂಣ ಲಿಂಗಪತ್ತೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ಆ ಬಾರಿ ಖಾಸಗಿ ವೈದ್ಯರ ಕಳ್ಳಾಟದ ದಂಧೆ ದೃಶ್ಯ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ.

 ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಮಾಹಾಂತೇಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ದಂಧೆ ಜೋರಾಗಿ ನಡೆಯುತ್ತಿದೆ.  ಮಹಾಂತೇಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ಕೇಳಿದಷ್ಟು ಹಣ ನೀಡಿದ್ರೇ ಕ್ಷಣ ಮಾತ್ರದಲ್ಲಿ ಭ್ರೂಣದ ಲಿಂಗ ಪತ್ತೆ ಮಾಡಿ ಹೇಳ್ತಾರೆ ಇಲ್ಲಿನ ವೈದ್ಯರು. ಅದಲ್ಲಿಯೂ ಹಿರಿಯ ವೈದ್ಯೆ ಅರುಣಾ ಅಕ್ಕಿ ಈ ದಂಧೆಯಲ್ಲಿ ಭಾಗಿಯಾಗಿರುವ ದೃಶ್ಯ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ. ಅಕ್ಕಿ ಆಸ್ಪತ್ರೆ ದಂಧೆಯನ್ನು ಚಿತ್ರೀಕರಿಸಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ನೀಡಿ ಹಲವು ತಿಂಗಳೇ ಕಳೆದ್ರೂ ಯಾವುದೇ ಕ್ರಮ ಮಾತ್ರ ಇಲ್ಲ.

ಬದಲಿಗೆ ದೂರಿನ ಮಾಹಿತಿಯನ್ನ ಆರೋಪಿ ವೈದ್ಯರಿಗೆ ನೀಡಿ ಮಾಹಿತಿ ದಾರರಿಗೆ ಬೆದರಿಕೆ ಹಾಕಿಸುತ್ತಿದ್ದಾರೆ. ಅಲ್ಲದೇ, ಕ್ರಮದ ಬಗ್ಗೆ ಕೇಳಲು ಪೋನ್​ ಮಾಡಿದ ದೂರುದಾರರಿಗೆ ಡಿಹೆಚ್ಓ ಬೆದರಿಕೆ ಹಾಕಿದ್ದಾರೆ. ಬಾಗಲಕೋಟೆಯಲ್ಲಿ ನ್ಯಾಯ ಸಿಗಲ್ಲ ಎಂಬುದನ್ನ ಅರಿತು ಬೆಂಗಳೂರಿನಲ್ಲಿರುವ ಆರೋಗ್ಯ ಇಲಾಖೆ ಆಯುಕ್ತರಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಆಗಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಕೆ.ಆರ್.ರಮೇಶ್​ ಕುಮಾರ್​ ಆವರೇ ಭ್ರೂಣ ಲಿಂಗಪತ್ತೆ ಬಗ್ಗೆ ಸಮರ ಸಾರಿದ್ದೇವೆ ಅಂತಾ ಬೆಳಗಾವಿ ಅಧಿವೇಶನದಲ್ಲಿ ಹೇಳಿಕೆ ನೀಡಿದ್ರು.  ಸುವರ್ಣ ನ್ಯೂಸ್ ಈಗ ಭ್ರೂಣ ಲಿಂಗ ಪತ್ತೆ ನಡೆಸುವ ಖಾಸಗಿ ವೈದ್ಯರ ದಂಧೆ ಬಗ್ಗೆ ಸಾಕ್ಷ್ಯ ಕೊಡುತ್ತಿದೆ. ದಂಧೆ ನಡೆಸುತ್ತಿರುವ ಖಾಸಗಿ ವೈದ್ಯರಿಗೆ, ಡಿಹೆಚ್ಒ ಖುದ್ದು ರಕ್ಷಣೆಗೆ ನಿಂತಿರೋದನ್ನು ಬಹಿರಂಗಪಡಿಸುತ್ತಿದ್ದೇವೆ. ಸಾರ್ವಜನಿಕರೇ ವೈದ್ಯರ ಕಳ್ಳಾಟದ ಕುರಿತು ದೃಶ್ಯ ಸಮೇತ ದೂರು ನೀಡಿದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಈಗ ಸಚಿವ ರಮೇಶ್ ಕುಮಾರ್ ಅವರು ಯಾವ ಕ್ರಮ ಕೈಗೊಳ್ತಾರೋ ನೋಡ್ಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿಗೆ ಬಿಗ್‌ ಗಿಫ್ಟ್: ಈ ರಸ್ತೆಲಿ 10.3 ಕಿ.ಮೀ ಉದ್ದದ ಬೃಹತ್ ಸೈಕ್ಲಿಂಗ್ ಕಾರಿಡಾರ್ ಜೂ.27ಕ್ಕೆ ಲೋಕಾರ್ಪಣೆ?
ಅಮ್ಮನ ಚೆನ್ನಾಗಿ ನೋಡಿಕೋ, ಚೆನ್ನಾಗಿ ಓದು, ಸ್ಟೀಲ್ ಪ್ಲಾಂಟ್ ದುರಂತ ಗಾಯಾಳುವಿನ ಕೊನೆಯ ಮಾತು