
ಬೆಂಗಳೂರು(ಜೂ.20): ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಅದೇ ಕ್ಷೇತ್ರದ ಬಿಬಿಎಂಪಿ ಸದಸ್ಯೆಯರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಮಹಿಳಾ ಕಾರ್ಪೋರೇಟರ್ಸ್ ವಿರುದ್ಧ ಶಾಸಕ ಮುನಿರತ್ನ ಬೆಂಬಲಿತ ಪಾಲಿಕೆ ಸದಸ್ಯರು ದಾಖಲೆ ಬಿಡುಗಡೆ ಮಾಡಿದ್ರೆ.ಇದೇಲ್ಲಾ ಬರೀ ಟೊಳ್ಳು ಆಪಾದನೆಗಳೆಂದು ಶಾಸಕರ ವಿರುದ್ಧವೇ ಕಾರ್ಪೋರೇಟರ್ಸ್ ಪ್ರತ್ಯಾರೋಪ ಮಾಡಿದರು.
‘ಮುನಿ’ದ ನಾರಿಯರು..!
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಮತ್ತು ಮೂವರು ಮಹಿಳಾ ಕಾರ್ಪೋರೇಟರ್ ಗಳು ನಡುವಿನ ಬಹಿರಂಗ ಸಮರ ಇದೀಗ ಮತ್ತೆ ತಾರಕಕ್ಕೇರಿದೆ. ಮಹಿಳಾ ಪಾಲಿಕೆ ಸದಸ್ಯರಾದ ಆಶಾ ಸುರೇಶ್, ಮಂಜುಳಾ ನಾರಾಯಣಸ್ವಾಮಿ , ಮಮತಾ ವಾಸುದೇವ್ ವಿರುದ್ಧ ಶಾಸಕ ಮುನಿರತ್ನ ಬೆಂಬಲಿಗರ ಕಾರ್ಪೋರೇಟರ್ಸ್'ಗಳು ಆರೋಪಗಳ ಸುರಿಮಳೆಗೈದಿದ್ದಾರೆ.
ಹೆಚ್‌ಎಂಟಿ ವಾರ್ಡ್ ಪಾಲಿಕೆ ಸದಸ್ಯೆ ಆಶಾ ಸುರೇಶ್ ಅವ್ರು ನಕಲಿ ಕಾಮಗಾರಿ ಹೆಸರಿನಲ್ಲಿ ಬಿಲ್ ಸೃಷ್ಟಿಸಿದ್ದಾರೆ. ಮಲ್ಲೇಶ್ವರಂ, ಯಶವಂತಪುರ, ಆರ್.ಆರ್ ನಗರದಲ್ಲಿ 105 ಕೋಟಿ ನಕಲಿ ಬಿಲ್ ಸೃಷ್ಟಿಸಿದ್ದಾರೆ. ಜೊತೆಗೆ ಪ್ರತಿ ವರ್ಷ ಪಾಲಿಕೆ ಸದಸ್ಯರಿಗೆ ನೀಡುವ 3 ಕೋಟಿ ಅನುದಾನ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಾಲಿಕೆ ಸ್ವತ್ತನ್ನು ಒತ್ತುವರಿ ಮಾಡಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ ಅಂತಾ ಆರೋಪಿಸಿ 25 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಕಳೆದ ನವೆಂಬರ್ ನಿಂದ ಒತ್ತಡ ಹಾಕಿ 2.5 ಲಕ್ಷ ಲಂಚ ಸ್ವೀಕರಿಸಿದ್ದಾರೆ ಅಂತಾ ಆರೋಪಿಸಲಾಗಿದೆ.
ಜೆಪಿ ಪಾರ್ಕ್ ಕಾರ್ಪೋರೇಟರ್ ಮಮತಾ ವಾಸುದೇವ್ ಜೆ.ಪಿ ಪಾರ್ಕ್‌ನಲ್ಲಿ ಮತ್ತಿಕೆರೆ ಕೆರೆಯ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಪೋಡಿಯಾಗದ ಜಮೀನು ಸರ್ವೇ ನಂಬರ್ ಬದಲಾಯಿಸಿ 9 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಅಂತಾ ಆರೋಪಿಸಲಾಗಿದೆ.
ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಮಹಿಳಾ ಕಾರ್ಪೋರೇಟರ್ಸ್ ಧರಣಿ ನಡೆಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಶಾಸಕರು ಹಾಗೂ ಕಾರ್ಪೋರೇಟರ್ಸ್‌ಗಳ ಕಿತ್ತಾಟದಿಂದ ಆರ್.ಆರ್ ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇನ್ನಾದರೂ ಕಚ್ಚಾಟ ನಿಲ್ಲಿಸಿ, ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.