ಇದೊಂದು ಫೋಟೋ ಸಾಕು ‘ಅಪ್ಪಾ ಐ ಲವ್ ಯೂ’ಅನ್ನಕ್ಕೆ!

Published : Aug 18, 2018, 08:02 PM ISTUpdated : Sep 09, 2018, 09:47 PM IST
ಇದೊಂದು ಫೋಟೋ ಸಾಕು ‘ಅಪ್ಪಾ ಐ ಲವ್ ಯೂ’ಅನ್ನಕ್ಕೆ!

ಸಾರಾಂಶ

ಕ್ಯಾನ್ಸರ್ ಪೀಡಿತ ತಂದೆಯ ಕೊನೆ ಆಸೆ! ಮಗಳ ಮದುವೆ ನೋಡುವುದೇ ಕೊನೆಯಾಸೆ! ಸ್ಟೆಚರ್ಸ್ ಮೇಲೆ ಮಲಗಿಕೊಂಡೇ ಮಗಳನ್ನು ಬೀಳ್ಕೊಟ್ಟ! ಪಾಪೂ ಪೆಡ್ರೋ ಮಗಳ ಪ್ರೀತಿಗೆ ತಲದೂಗಿದ ಜಗತ್ತು

ಮನಿಲಾ(ಆ.18): ಮಗಳ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಡುವ ಸಮಯ ಪ್ರತಿಯೊಬ್ಬ ತಂದೆಯ ಪಾಲಿಗೂ ತುಂಬ ಭಾವನಾತ್ಮಕವಾದ ಕ್ಷಣ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಮಗಳಿಂದ ಶಾಶ್ವತವಾಗಿ ಬೇರೆಯಾಗುವ ಭಾವ ಓರ್ವ ತಂದೆ ಮಾತ್ರ ವಿವರಿಸಬಲ್ಲ.

ಅದರಂತೆ ಕ್ಯಾನ್ಸರ್ ಪೀಡಿತ ತಂದೆಯೋರ್ವ ಆಗಷ್ಟೇ ಮದುವೆಯಾದ ತನ್ನ ಮಗಳನ್ನು ಬೀಳ್ಕೊಡಲು ಆಸ್ಪತ್ರೆಯ ಸ್ಟೆಚರ್ಸ್ ಮೇಲೆಯೇ ಬಂದ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.  ಮನಿಲಾದ ಪಾಪೂ ಪೆಡ್ರೋ ವಿಲ್ಲರಿನ್ ಎಂಬುವವರು ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತಮ್ಮ ಮಗಳು ಚಾರ್ಲೊಟ್ಟೆ ವಿಲ್ಲರಿನ್ ಅವರ ಮದುವೆ ನೋಡಬೇಕೆಂಬುದು ಅವರ ಆಸೆಯಾಗಿತ್ತು.

ತಂದೆಯ ಆಸೆಯಂತೆ ಮದುವೆ ಮಾಡಿಕೊಂಡ ಚಾರ್ಲೊಟ್ಟೆಳನ್ನು ಬೀಳ್ಕೊಡಲು ಪಾಪೂ ಪೆಡ್ರೋ ಚರ್ಚ್ ಗೆ ಬಂದು, ಸ್ಟೆಚರ್ಸ್ ಮೇಲೆ ಮಲಗಿಕೊಂಡೇ ಆಕೆಯ ಕೈ ಹಿಡಿದು ಬಿಳ್ಕೊಟ್ಟಿದ್ದಾರೆ ಪಾಪೂ ಪೆಡ್ರೋ.

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಪೂ ಪೆಡ್ರೋ ಬಹಳ ದಿನ ಬದುಕುಳಿಯುವುದು ಅನುಮಾನ ಎಂದು ವೈದ್ಯರು ಹೇಳಿದ್ದಾರೆ. ಈ ಕಾರಣದಿಂದ ಚಾರ್ಲೊಟ್ಟೆ ತಂದೆಯ ಆಸೆಯನ್ನು ಪೂರೈಸಿದ್ದು, ಚಾರ್ಲೊಟ್ಟೆಯ ಕೈ ಹಿಡಿದು ಪಾಪೂ ಪೆಡ್ರೋ ಬೀಳ್ಕೊಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌