ಪ್ರತಿ ದಿನ ತನ್ನ ಮಗಳೊಂದಿಗೆ ಸಮಾಧಿಯಲ್ಲಿ ಮಲಗುತ್ತಾನೆ ಈ ತಂದೆ!: ಕಾರಣ ಕೇಳಿದ್ರೆ ಭಾವುಕರಾಗ್ತೀರಾ!

Published : Jul 04, 2017, 01:34 PM ISTUpdated : Apr 11, 2018, 01:11 PM IST
ಪ್ರತಿ ದಿನ ತನ್ನ ಮಗಳೊಂದಿಗೆ ಸಮಾಧಿಯಲ್ಲಿ ಮಲಗುತ್ತಾನೆ ಈ ತಂದೆ!: ಕಾರಣ ಕೇಳಿದ್ರೆ ಭಾವುಕರಾಗ್ತೀರಾ!

ಸಾರಾಂಶ

ತಂದೆಯೊಬ್ಬ ಪ್ರತಿದಿನ ತನ್ನ ಮಗಳೊಂದಿಗೆ ಸಮಾಧಿಯಲ್ಲಿ ಮಲಗುತ್ತಾನೆ. ಇದು ವಿಚಿತ್ರವೆನಿಸಿದರೂ ಇದರ ಹಿಂದಿನ ಕಾರಣ ಕೇಳಿದ್ರೆ ನಿಜಕ್ಕೂ ನೀವು ಭಾವುಕರಾಗ್ತೀರಿ, ಆ ತಂದೆಗೆ ತನ್ನ ಮಗಳ ಮೇಲಿರುವ ಪ್ರೀತಿ ಕಂಡು ಅಚ್ಚರಿ ಪಡುವುದರಲ್ಲೂ ಅನುಮಾನವಿಲ್ಲ. ಹಾಗಾದ್ರೆ ಅವರಿಬ್ಬರು ಸಮಾಧಿಯಲ್ಲಿ ಯಾಕೆ ಮಲಗುತ್ತಾರೆ? ಇಲ್ಲಿದೆ ಉತ್ತರ

ನವದೆಹಲಿ(ಜು.04): ತಂದೆಯೊಬ್ಬ ಪ್ರತಿದಿನ ತನ್ನ ಮಗಳೊಂದಿಗೆ ಸಮಾಧಿಯಲ್ಲಿ ಮಲಗುತ್ತಾನೆ. ಇದು ವಿಚಿತ್ರವೆನಿಸಿದರೂ ಇದರ ಹಿಂದಿನ ಕಾರಣ ಕೇಳಿದ್ರೆ ನಿಜಕ್ಕೂ ನೀವು ಭಾವುಕರಾಗ್ತೀರಿ, ಆ ತಂದೆಗೆ ತನ್ನ ಮಗಳ ಮೇಲಿರುವ ಪ್ರೀತಿ ಕಂಡು ಅಚ್ಚರಿ ಪಡುವುದರಲ್ಲೂ ಅನುಮಾನವಿಲ್ಲ. ಹಾಗಾದ್ರೆ ಅವರಿಬ್ಬರು ಸಮಾಧಿಯಲ್ಲಿ ಯಾಕೆ ಮಲಗುತ್ತಾರೆ? ಇಲ್ಲಿದೆ ಉತ್ತರ

ಜಾಂಗ್ ಲಿಯೋಂಗ್ ಹಾಗೂ ಡೆಂಗ್ ಈ ದಂಪತಿಗೆ ಎರಡು ವರ್ಷದ ಮುದ್ದಿನ ಮಗಳಿದ್ದಾಳೆ. ಆದರೆ ಆ ಪುಟ್ಟ ಬಾಲೆ ಗಂಭೀರ ಕಾಯಿಲೆಯೊಂದರಿಂದ ಬಳಲುತ್ತಿದ್ದಾಳೆ. ಇದು ತಂದೆ ತಾಯಿ ಇಬ್ಬರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಮಗಳು ದೊಡ್ಡವಳಾಗಿ ಆಕೆಗೆ ತನ್ನ ಕಾಯಿಲೆಯ ಬಗ್ಗೆ ತಿಳಿದಾಗ, ಆಕೆಗೆ ಸಾವಿನ ಭಯ ಕಾಡುವ ಸಾಧ್ಯತೆ ಇದೆ. ಆದರೆ ತಮ್ಮಿಂದ ಆಕೆಯ ಮುಖದಲ್ಲಿ ಆ ಭಯವನ್ನು ನೋಡಲು ಸಾಧ್ಯವಿಲ್ಲ. ಯಾರೇ ಆಗಲಿ ತಾನು ಅತಿ ಹೆಚ್ಚು ಪ್ರೀತಿಸುವ ವ್ಯಕ್ತಿಯ ಮುಖದಲ್ಲಿ ನೋವು ಹಾಗೂ ನೋಡಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ತಂದೆಯೊಬ್ಬ ಮಗಳ ಕಣ್ಣಿನಲ್ಲಿ ಈ ಭಯ ನೋಡಲು ಯಾವತ್ತೂ ಇಚ್ಛಿಸುವುದಿಲ್ಲ ಎಂಬುವುದು ಈ ಹೆತ್ತವರ ಅಭಿಪ್ರಾಯ.

ಇದಕ್ಕಾಗಿಯೇ ತನ್ನ ಮಗಳ ಮನಸ್ಸಿನಿಂದ ಈ ಭಯವನ್ನು ದೂರ ಓಡಿಸಲು ತಂದೆ ಒಂದು ವಿಭಿನ್ನ ಮಾರ್ಗ ಹುಡುಕಿದ್ದಾರೆ. ಇವರು ತಮ್ಮ ಮನೆಯ ಅಂಗಳದಲ್ಲಿ ಸಮಾಧಿಯೊಂದನ್ನು ನಿರ್ಮಿಸಿದ್ದಾರೆ ಅಲ್ಲದೇ ಪ್ರತಿ ದಿನ ತನ್ನ ಮಗಳೊಂದಿಗೆ ಅವರು ಅದೇ ಸಮಾಧಿಯಲ್ಲಿ ಮಲಗುತ್ತಾರಂತೆ. ಅಲ್ಲದೇ ಒಂದು ದಿನ ನೀನೊಬ್ಬಳೇ ಇಲ್ಲಿ ಮಲಗುವ ಅನಿವಾರ್ಯವೂ ಎದುರಾಗಬಹುದು. ಇಂತಹ ಸಂದರರ್ಭ ಬಂದರೆ ನೀನು ಯಾವತ್ತೂ ಭಯಪಡಬಾರದು ಎಂದು ಈ ತಂದೆ ತಾಯಿ ಮಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರಂತೆ.

ಮಕ್ಕಳ ಹೊಕ್ಕುಳ ಬಳ್ಳಿಯಿಂದ ಹೊರಬರುವ ರಕ್ತವನ್ನು ಕೋರ್ಡ್ ಬ್ಲಡ್ ಎಂದು ಕರೆಯುತ್ತಾರೆ. ಇದರಲ್ಲಿವ ಸ್ಟೆಮ್ ಸೆಲ್ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಇನ್ನು ಈ ದಂತಿಗಳು ತಮ್ಮ ಮಗಳನ್ನು ಉಳಿಸಿಕೊಳ್ಳಲು ಎಲ್ಲಿ ಬೇಕಾದರೂ ಹೋಗುತ್ತೇವೆ. ಯಾವ ವೈದ್ಯರನ್ನು ಬೇಕಾದರೂ ಸಂಪರ್ಕಿಸಲು ತಯಾರಿದ್ದೇವೆ ಎನ್ನುತ್ತಾರೆ. ಆದರೆ ಇವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣದಿಂದ ಉತ್ತಮ ಚಿಕಿತ್ಸೆ ನೀಡಲು ವಿಫಲಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.   

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ