
ನವದೆಹಲಿ(ಜುಲೈ 04): ಅನಿವಾರ್ಯ ಕಾರಣಗಳಿಂದ ನಿಷೇಧಿತ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ಹಕ್ಕನ್ನು ಸರಕಾರ ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಇಂದು ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹಾರ್ ಅವರು, ಹಳೆಯ ನೋಟುಗಳ ಎಕ್ಸ್’ಚೇಂಜ್’ಗೆ ಏನು ವ್ಯವಸ್ಥೆ ಮಾಡುತ್ತೀರಿ ಎಂಬುದನ್ನು ಇದೇ ಜುಲೈ 17ರೊಳಗೆ ನಮಗೆ ತಿಳಿಸಿ ಎಂದು ಸರಕಾರಕ್ಕೆ ಅಪ್ಪಣೆ ಮಾಡಿದರು.
“ಜೈಲುಶಿಕ್ಷೆ ಅನುಭವಿಸುವುದೂ ಸೇರಿದಂತೆ ಅನಿವಾರ್ಯ ಕಾರಣಗಳಿಂದ ಡಿ.30ರೊಲಗೆ ನೋಟು ಬದಲಾವಣೆ ಮಾಡದವರಿಗೆ ಈಗ ಅವಕಾಶ ನಿರಾಕರಿಸುವುದು ನಿಜಕ್ಕೂ ಗಂಭೀರ ವಿಷಯ ಎಂದು ಮುಖ್ಯನ್ಯಾಯಮುರ್ತಿಗಳು ಹೇಳಿದರು.
ನವೆಂಬರ್ 8ರ ಮಧ್ಯರಾತ್ರಿಯಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದಾಗಿ ದಿಢೀರ್ ಘೋಷಣೆ ಮಾಡಿದ್ದರು. ಡಿ.30ರೊಳಗೆ ಜನರು ತಮ್ಮ ಹಳೆಯ ನೋಟುಗಳನ್ನು ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಎಕ್ಸ್’ಚೇಂಜ್ ಮಾಡುವಂತೆ ಸೂಚಿಸಲಾಯಿತು. ಮಾರ್ಚ್ ತಿಂಗಳವರೆಗೂ ಜನರು ಆರ್’ಬಿಐನಲ್ಲಿ ಹಳೆಯ ನೋಟುಗಳನ್ನು ಡೆಪಾಸಿಟ್ ಮಾಡುವ ಅವಕಾಶ ಒದಗಿಸಲಾಗಿತ್ತು. ಆ ನಂತರ, ಹಳೆಯ ನೋಟುಗಳನ್ನು ಎಲ್ಲಿಯೂ ಸ್ವೀಕರಿಸಲಾಗುತ್ತಿಲ್ಲ. ಅವು ಅಕ್ಷರಶಃ ರದ್ದಿಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.