
ಶಿವಮೊಗ್ಗ(ಮೇ.21): ಹೆಸರಿಗೆ ಮಾತ್ರ ರೈತರಿಗೆ ಸಾಲ, ಆದ್ರೆ ಸಾಲದ ಹಣ ಇನ್ಯಾರದೋ ಖಾತೆಗೆ ವರ್ಗಾವಣೆ. ಪ್ರತಿಷ್ಠಿತ ಕಾರ್ಪೋರೇಷನ್ ಬ್ಯಾಂಕ್ನ ಅಧಿಕಾರಿಗಳು ಮಾಡಿದ ಮೋಸಕ್ಕೆ 40ಕ್ಕೂ ಹೆಚ್ಚು ರೈತರಿಗೆ 8 ಕೋಟಿ ರೂಪಾಯಿ ಮಕ್ಮಲ್ ಟೋಪಿ ಬಿದ್ದಿದೆ. ಬರಗಾಲದಲ್ಲಿ ಗಾಯದ ಮೇಲೆ ಬರೆ ಎಳೆದ ಬ್ಯಾಂಕ್ನ ಮೋಸಕ್ಕೆ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಒಂದು ವರದಿ.
ಶಿವಮೊಗ್ಗ ಜಿಲ್ಲೆಯ ಬಿ.ಹೆಚ್.ರಸ್ತೆಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಮ್ಯಾನೇಜರ್ ಬಾಲಕೃಷ್ಣ ಮೂರ್ತಿ ಮತ್ತು ಫೀಲ್ಡ್ ಆಫಿಸರ್ ಮಧುಸೂದನ್ ಎಂಬವವರು ಮಾಡಿದ ಎಡವಟ್ಟಿನಿಂದ 40ಕ್ಕೂ ಹೆಚ್ಚು ರೈತರು ಬೀದಿಗೆ ಬಿದ್ದಿದ್ದಾರೆ. ರೈತರಿಂದ ಜಮೀನಿನ ಪಹಣಿ ಪತ್ರ ಹಾಗೂ ಸಹಿ ಮಾಡಿದ ಖಾಲಿ ಚೆಕ್ಗಳನ್ನು ಪಡೆದು ಅವರ ಹೆಸರಲ್ಲೇ ಜಮೀನು ಅಭಿವೃದ್ಧಿ ಸಾಲ, ಬೆಳೆ ಸಾಲ ಎಂದೆಲ್ಲ ಸಾಲ ಮಂಜೂರು ಮಾಡುತ್ತಿದ್ದರು. ನಂತರ ಬೇಕಾದವರ ಹೆಸರಗಳನ್ನು ಬರೆದು RTGS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಬೆಳೆ ಸಾಲದ ಬಗ್ಗೆ ರೈತರು ಕೇಳಿದಾಗ ಇಂದು, ನಾಳೆ ಅಂತ ಕಳೆದ 6 ತಿಂಗಳಿನಿಂದ ಸತಾಯಿಸುತ್ತಿದ್ರು. ರೈತರು ತಮ್ಮ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಈಗಾಗಲೇ ಬ್ಯಾಂಕ್ ಆಡಳಿತ ಮಂಡಳಿ ಈ ಬಗ್ಗೆ ಪ್ರಾಥಮಿಕ ತನಿಖೆ ಕೈಗೊಂಡಿದ್ದು ವಂಚಕ ಅಧಿಕಾರಿಗಳನ್ನು ಅಮಾನತು ಮಾಡಿದೆ. ಒಟ್ನಲ್ಲಿ ಬ್ಯಾಂಕ್ನ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತರು ಕಂಗಾಲಾಗಿದ್ದು ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.