ಚಿತ್ರ ಕಲಾವಿದ ಭೀಮರಾವ್​ ಮುರಗೋಡ್​​​​ ನಿಧನ

By Web DeskFirst Published Oct 5, 2018, 10:06 PM IST
Highlights

ಕಲಾಲೋಕದ ಒಂದು ಕೊಂಡಿ ಕಳಚಿದೆ. ಮಹಾನ್ ನಾಯಕರನ್ನು ತಮ್ಮ ಕಲಾಕೃತಿಗಳ ಮೂಲಕ ಹಸಿರಾಗಿರಿಸಿದ್ದ ಕಲಾವಿದ  ಭೀಮರಾವ್​ ಮುರಗೋಡ್​​​​[75] ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬೆಂಗಳೂರು(ಅ.5] ಭಾರತದ ಬಹುತೇಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನು ತಮ್ಮ ಮುಂದೆ ಕೂರಿಸಿಕೊಂಡು ಅವರ ಚಿತ್ರ ರಚಿಸಿದ್ದ ಕಲಾವಿದ ಭೀಮರಾವ್​ ಮುರಗೋಡ್​​​​[75] ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಮುರಗೋಡ್ ಅವರಿಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು. ಭೀಮರಾವ್​ ಮುರಗೋಡ್​ ಅವರಿಗೆ  ಪುತ್ರರಾದ ಸ್ವರೂಪ್ ಮುರಗೋಡ್, ಸಾಮ್ರಾಟ್ ಗೌತಮ್ ಹಾಗೂ ಪುತ್ರಿ ಮೊನಾಲಿಸಾ ವಿನಯ್ ಮತ್ತು ಪತ್ನಿ ಶಾಲಿನಿ ಮುರಗೋಡ್ ಇದ್ದಾರೆ. ಅಂತ್ಯಕ್ರಿಯೆ ಹುಟ್ಟೂರು ಗೋಕಾಕ್​​ನಲ್ಲಿ ನಡೆಯಲಿದೆ.

ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದ ಅವರು, ಸುಮಾರು 4 ದಶಕಗಳ ಕಾಲ ನವದೆಹಲಿಯಲ್ಲಿ ಇದ್ದರು. 2000ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್​ ಭಾರತಕ್ಕೆ ಭೇಟಿ ನೀಡಿದ್ದಾಗ ಅವರಿಗಾಗಿಯೇ, ಅವರದ್ದೇ ಕಲಾಕೃತಿ ರಚಿಸಿದ್ದರು. 1978ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದ್ದಾಗ ಅವರ ಕಲಾಕೃತಿಯನ್ನು ಬಿಡಿಸಿದ್ದರು.

ಮದರ್ ಥೆರೇಸಾ, ಪೋಪ್ ಜಾನ್ ಪೌಲ್-2, ಇಂದಿರಾ ಗಾಂಧಿ, ಪಂಡಿತ್ ರವಿಶಂಕರ್, ರಾಜಾ ರಾಮಣ್ಣ, ಎಂ.ಎಫ್ ಹುಸೇನ್ ಸೇರಿದಂತೆ ಅನೇಕ ಗಣ್ಯರ ಕಲಾಕೃತಿ ರಚಿಸಿ ಜನಮನ್ನಣೆಗೆ ಪಾತ್ರವಾಗಿದ್ದರು.

 

 

click me!