[ಸುಳ್ ಸುದ್ದಿ]  ‘30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕ ಕೊಂಡ ರಾಹುಲ್ ಗಾಂಧಿ?

By Suvarna Web DeskFirst Published Feb 25, 2018, 3:57 PM IST
Highlights
  • ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಬಸವಣ್ಣನವರ ವಚನ ಹೇಳಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ.
  • ಕನ್ನಡ ಕಲಿಯುವ ಸಲುವಾಗಿ ದಿನದಲ್ಲಿ ಒಂದು ಗಂಟೆಯನ್ನು ರಾಹುಲ್ ಮೀಸಲಿಡಲಿದ್ದಾರೆ.

ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಬಸವಣ್ಣನವರ ವಚನ ಹೇಳಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಿರುವ ರಾಹುಲ್, ‘30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕವನ್ನು ಖರೀದಿಸಿದ್ದಾರೆ.

ದಿನವೂ ಒಂದೊಂದು ಅಧ್ಯಾಯವನ್ನು ಕರಗತ ಮಾಡಿಕೊಂಡು ಮುಂದಿನ ತಿಂಗಳ ವೇಳೆ ನಿರರ್ಗಳವಾಗಿ ಮಾತನಾಡುವುದಾಗಿ ಹೇಳಿದ್ದಾರೆ. ಕನ್ನಡ ಕಲಿಯುವ ಸಲುವಾಗಿ ದಿನದಲ್ಲಿ ಒಂದು ಗಂಟೆಯನ್ನು ರಾಹುಲ್ ಮೀಸಲಿಡಲಿದ್ದಾರೆ. ಇದಕ್ಕಾಗಿ ಕನ್ನಡ ಶಿಕ್ಷಕರೊಬ್ಬರನ್ನು ದೆಹಲಿಗೂ ಕರೆದೊಯ್ಯಲಿದ್ದಾರೆ.

ಮುಂದಿನ ಬಾರಿ ಭಾಷಣದಲ್ಲಿ ಕನ್ನಡದ ಪಾಂಡಿತ್ಯ ಪ್ರದರ್ಶಿಸಲು ಶ್ರೀಗಂಧದ ಕೊರಡು ತೇಯ್ದು ತೇಯ್ದು ಕೊರಡೆರಡಾಯಿತು ಎಂದು ಟಂಗ್‌ಟ್ವಿಸ್ಟರ್ ಕೂಡ ಹೇಳಲಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. [ಸುಳ್ ಸುದ್ದಿ ವಾರ್ತೆ]

click me!